ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿಬೀಳಿಸೋ ಅಂಥ ಘಟನೆ ನಡೆದಿದೆ. ಜೈಲಿನಿಂದ ಬಂದ ರೌಡಿಶೀಟರ್ ಮೂರೇ ದಿನದಲ್ಲಿ ಕೊಲೆಯಾಗಿದ್ದಾನೆ. ಜೆ ಸಿ ಆನಂದ್ (36) ಕೊಲೆಯಾದ ರೌಡಿಶೀಟರ್. ಕೊಲೆ ನಡೆದಿದ್ದು ಅಕ್ಟೋಬರ್ 24 ರಂದು. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರದ ಬಳಿ. ಇದೀಗ ಆ ಕೊಲೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗ್ತಿದೆ.
ಈತ 18 ವರ್ಷದವನಿದ್ದಾಗಲೇ ಕೊಲೆ ಮಾಡಿ ಜೈಲು ಸೇರಿದ್ದ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ. ಎಷ್ಟೋ ಸಲ ಓದಿರ್ತೀವಿ ಕೊಲೆಗೆ, ಕಳ್ಳತನಕ್ಕೆ ಸಿನಿಮಾಗಳ ಸ್ಟೈಲ್ ನಲ್ಲೇ ನಡೆದಿರೋದು. ಆದ್ರೆ ನಡೆದಿರುವ ಕೊಲೆ ಸಿನಿಮಾ ಶೈಲಿಯಲ್ಲಿ ಅಲ್ಲ. ಬದಲಿಗೆ ಈಗ ಕೊಲೆಯಾಗಿರೋನು ಆ ಸ್ಟೈಲ್ ನಲ್ಲಿ ಹೊರ ಬಂದಿದ್ದ.
ಸಲಗ ಸಿನಿಮಾದಲ್ಲಿ ನಾಯಕ ಜೈಲಿನಿಂದ ಬರುವಾಗ ಅದ್ದೂರಿ ಸ್ವಾಗತ ಸಿಗುತ್ತರ. ಅಷ್ಟೆ ಅಲ್ಲ ಆತನ ಹಿಂದೆ ಮುಂದೆ ಕಾರುಗಳು ಹೋಗ್ತಾ ಇರುತ್ತೆ. ಮೃತ ಆನಂದ್ ರಿಲೀಸ್ ಆದಾಗಲೂ ಇದೇ ಥರದ ಅದ್ಧೂರಿ ಸ್ವಾಗತ ಸಿಕ್ಕಿತ್ತು ರಿಲೀಸ್ ಆದ್ಮೇಲೆ ಹವಾ ಮೆಂಟೈನ್ ಮಾಡ್ಬೇಕು ಅಂದ್ಕೊಂಡಿದ್ದನಂತೆ.
ಚನ್ನರಾಯಪಟ್ಟಣದಲ್ಲೇ ಉಳಿದುಕೊಂಡಿದ್ದ. ಆದ್ರೆ ಯಮನ ಕರೆ ಇತ್ತೇನೋ ಬೆಂಗಳೂರಿಗೆ ಬಂದಿದ್ದವನನ್ನ ದುಷ್ಕರ್ಮಿಗಳು ಗುರುತೇ ಸಿಗದ ಹಾಗೇ ಕೊಂದಾಕಿದ್ದಾರೆ.