ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಸಂಗಡಿಗರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸಾಕ್ಷಿಗಳ ಟ್ರಯಲ್ ಕೂಡ ನಡೀತಾ ಇದೆ. ಅದರಲ್ಲಿ ಬಹಳ ಮುಖ್ಯವಾಗಿ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರ ಸಾಕ್ಷಿ ವಿಚಾರಣೆ ವೇಳೆಯೇ ಶಾಕ್ ಕೂಡ ಆಗಿತ್ತು. ಪೊಲೀಸರು ದಾಖಲಿಸಿದ್ದ ಹೇಳಿಕೆ ಒಂದಾದ್ರೆ ರತ್ನಪ್ರಭಾ ಕೋರ್ಟ್ ಮುಂದೆ ನೀಡಿದ ಹೇಳಿಕೆಯೇ ಬೇರೆ ಆಗಿತ್ತು. ಬಳಿಕ ಅವರನ್ನ ಮುಖ್ಯ ಸಾಕ್ಷಿಯಾಗಿ ಪರಿಗಣಿಸಬೇಡಿ ಎಂಬ ಮನವಿಯನ್ನು ಪೊಲೀಸರು ಕೋರ್ಟ್ ಗೆ ಮಾಡಿಕೊಂಡಿದ್ದರು. ಅದಾದ ಮೇಲೆ ಆರೋಪಿಗಳನ್ನು ನಿಲ್ಲಿಸಿ ತೆಗೆದಿದ್ದ ಫೋಟೋ ಬೇರೆ ಜಾಗ ಆಗಿತ್ತು, ಪೊಲೀಸರು ನೀಡಿದ ಹೇಳಿಕೆಯ ಜಾಗವೇ ಬೇರೆ ಆಗಿತ್ತು. ಈ ಎಲ್ಲಾ ಬೆಳವಣಿಗೆಯ ನಡುವೆ ಇದೀಗ ಕರ್ನಾಟಕ ಸಂಘಟನೆ ಹೋರಾಟಕ್ಕೆ ಕರೆ ನೀಡಿದೆ.
ಪೊಲೀಸರು ದರ್ಶನ್ ವಿರುದ್ಧ ಸುಳ್ಳು ದಾಖಲೆಗಳನ್ನ ಸೃಷ್ಟಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿರುವ ಸಂಘಟನೆ ಮಾರ್ಚ್ 11ರಂದು ಬೆಳಗ್ಗೆ 11.30ಕ್ಕೆ ಹೋರಾಟಕ್ಕೆ ಸಜ್ಜಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ನಟರಾಜ್ ಬೊಮ್ಮಸಂದ್ರ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಇಂದು ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ಒಬ್ಬ ನಟ ಜೈಲಲ್ಲಿ ಇರುವಂತಹ ಪರಿಸ್ಥಿತಿಯನ್ನ ತಂದಿದ್ದಾರೆ. ಈ ರೀತಿ ಪೊಲೀಸ್ ಅಧಿಕಾರಿಗಳೆ ನಕಲಿ ದಾಖಲೆ ಸೃಷ್ಟಿಸಿರುವುದು ತಪ್ಪು ಎಂದಿರುವ ಸಂಘಟನೆ ಈಗ ಪ್ರತಿಭಟನೆಗೆ ಮುಂದಾಗಿದೆ. ಪ್ರತಿಭಟನೆಯಲ್ಲಿ ಯಾರೆಲ್ಲಾ ಭಾಗಿಯಾಗಲಿದ್ದಾರೆ ಎಂಬುದು ಅಂದಿಗೆ ತಿಳಿಯಲಿದೆ.



