ರಾಮನಗರ: ಜಿಲ್ಲೆಯ ಚನ್ನಪಟ್ಟಣದಲ್ಲಿ ಸಿ ಪಿ ಯೋಗೀಶ್ವರ್ ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಅದು ಏಕವಚನದಲ್ಲೇ. ಆಗ ರಾಸಲೀಲೆ ಆಡಿ ಕೊಂಡು ಕುಳಿತಿದ್ದವರು, ಈಗ ಬಂದಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಲೂಕಿಗೆ ಬರಲಿಲ್ಲ. ಆಗ ರಾಸಲೀಲೆ ಮಾಡಿಕೊಂಡಿದ್ದು, ಈಗ ಜನರೆದುರು ಬಂದಿದ್ದಾರೆ. ಹೊಟೇಲ್ ನಲ್ಲಿ 14 ತಿಂಗಳು ಇದ್ದರಲ್ಲ, ಹೆಚ್ಡಿಕೆ ಬಗ್ಗೆ ಗೊತ್ತೆ ಇದೆ. ಇನ್ಮುಂದೆ ಕುಮಾರಸ್ವಾಮಿ ಅವ್ರನ್ನ ಏಕವಚನದಲ್ಲೇ ಮಾತನಾಡುತ್ತೇನೆ. ಸಿಎಂ ಆಗಿದ್ದಾಗ ಹೊಟೇಲ್ ನಲ್ಲಿ ವೈಯಕ್ತಿಕ ಜೀವನ ಮಾಡುತ್ತಿದ್ದರು.
ಕುಮಾರಸ್ವಾಮಿ ವಿಚಾರ ಇಡೀ ರಾಜ್ಯದ ಜನತೆಗೆ ಗೊತ್ತಿಲ್ಲ. ನೇರವಾಗಿ ದಾಖಲೆ ಇಟ್ಟುಕೊಂಡು ಮಾತನಾಡುತ್ತೇನೆ. ಕುಮಾರಸ್ವಾಮಿ ಹೇಳದೆ ಹೋದರೇ ನಾನೇ ಹೇಳುತ್ತೇನೆ. ನನ್ನ ಬಗ್ಗೆ ಮಾತನಾಡಿದ್ರೆ ಅಡ್ಡ ಹಾಕಿ ಹಿಡಿದು ಕೇಳುತ್ತೇನೆ. ನಮ್ಮ ಪಾರ್ಟಿಯವರೇ ಅಲ್ಲಲ್ಲೇ ಅವರನ್ನ ಹೊಗಳುತ್ತಾರೆ. ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಬೆಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.