ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಸಿಪಿ ಯೋಗೀಶ್ವರ್ : ಈ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರೋದು ಅಂದ್ರು..!

1 Min Read

 

ಬೆಂಗಳೂರು: ರಾಜ್ಯ ರಾಜಕಾರಣ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲೂ ಸಿಪಿ ಯೋಗೀಶ್ವರ್ ಅವರದ್ದೆ ಎನ್ನಲಾದ ಆಡಿಯೋ ಸಿಕ್ಕಾಪಟ್ಟೆ ಸಂಚಲನ ಉಂಟು ಮಾಡಿತ್ತು. ಅಮಿತ್ ಶಾ ರೌಡಿ, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ವಿಚಾರ ಸೇರಿದಂತೆ ಹಲವು ವಿಚಾರಗಳು ಆ ಆಡಿಯೋದಲ್ಲಿ ಕೇಳಿ ಬಂದಿತ್ತು. ಆದರೆ ಇದೀಗ ಆ ಆಡಿಯೋ ಬಗ್ಗೆ ವಿವರಣೆ ನೀಡಿರುವ ಸಿಪಿ ಯೋಗೀಶ್ವರ್, ಆ ಆಡಿಯೋ ನನ್ನದಲ್ಲ. ಅದೊಂದು ಫೇಕ್ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ನಾನು ರಾಜಕಾರಣಿಯ ಜೊತೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಹೀಗಾಗಿ ವಿರೋಧಿಗಳು ಹೆಚ್ಚಾಗಿದ್ದಾರೆ. ವಿಡಿಯೋ ಗಳನ್ನು ಬಿಟ್ಟು ಬಿಡ್ತೀರಿ. ಆದ್ರೆ ಯಾವುದೋ ಆಡಿಯೋವನ್ನು ಹಿಡ್ಕೊಂಡು ಬಿಟ್ಟಿರಲ್ಲ. ಈ ಬಾರಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ನನ್ನದು ಏನೇ ಇದ್ದರು ನೇರ ರಾಜಕಾರಣ. ನನ್ನ ವಿರೋಧಿಗಳು ಪ್ಲ್ಯಾನ್ ಮಾಡಿ, ಈ ರೀತಿ ಮಾಡಿದ್ದಾರೆ.

ಈ ರೀತಿಯ ಕೆಲಸಗಳಿಂದ ನನಗೇನು ಡ್ಯಾಮೇಜ್ ಆಗಲ್ಲ. ಪ್ರಬಲವಾಗಿಯೇ ಇದ್ದೀನಿ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಎಲ್ಲಾ ರೀತಿಯ ಕೆಲಸವನ್ನು ಮಾಡುತ್ತೇನೆ. ದಿನ ಬೆಳಗಾದರೆ ಯಾರ್ಯಾರು ಏನೇನೋ ಮಾತನಾಡುತ್ತಾ ಇರುತ್ತಾರೆ. ಹೀಗಾಗಿ ಅದರ ಬಗ್ಗೆ ಕಾನೂನು ಕ್ರಮದ ಬಗ್ಗೆ ಚಿಂತನೆ ಮಾಡುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *