ನವದೆಹಲಿ : ಕೊರೊನಾ ಎಂದ ಕೂಡಲೇ ಜನ ಭಯಭೀತರಾಗುತ್ತಾರೆ. ಎರಡು ವರ್ಷ ಅದೆಷ್ಟೋ ಜನ ಆತ್ಮೀಯರನ್ನು ಕಳೆದುಕೊಂಡಿದ್ದಾರೆ, ಅದೆಷ್ಟೋ ಜನ ತಮ್ಮವರನ್ನೇ ಕಳೆದುಕೊಂಡಿದ್ದಾರೆ, ಅದೆಷ್ಟೋ ಜನ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಎರಡು ವರ್ಷ ಕೈನಲ್ಲಿ ಕೆಲಸವಿಲ್ಲದೆ, ಹಣವಿಲ್ಲ, ಅವರಿವರು ಕೊಡುವ ಫುಡ್ ಕಿಟ್ ಗಳಿಗಾಗಿ ಸಾಕಷ್ಟು ಜನ ಕಾದಿರುವಂತದ್ದು ಇದೆ. ಆದರೆ ಒಂದು ವರ್ಷದಿಂದ ಎಲ್ಲರೂ ನಿರಾಳರಾಗಿದ್ದಾರೆ. ಬದುಕನ್ನು ಮೊದಲಿನಂತೆ ಜೀವಿಸಲು ಆರಂಭಿಸಿದ್ದಾರೆ. ಈ ಮಧ್ಯೆ ಮತ್ತೆ ಕೊರೊನಾ ಸದ್ದು ಮಾಡಿದರೆ ಹೇಗಿರಬೇಡ ಮನುಷ್ಯನ ಮನಸ್ಥಿತಿ.
ಹೌದು, ಕೊರೊನಾವನ್ನು ಹುಟ್ಟು ಹಾಕಿದ್ದ ಚೀನಾದಲ್ಲಿ ಈಗಾಗಲೇ ಕೊರೊನಾ ಮತ್ತೆ ತನ್ನ ಆರ್ಭಟವನ್ನು ಹೆಚ್ಚು ಮಾಡಿದೆ. ಚೀನಾದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ರಾಶಿ ರಾಶಿ ಹೆಣಗಳು ಬಿದ್ದಿವೆ. ಕೊರೊನಾದಿಂದ ಬಹುತೇಕ ಆಸ್ಪತ್ರೆಗಳು ಭರ್ತಿಯಾಗಿದೆ. ಇನ್ನು ಮೂರು ತಿಳಗಳಿನಲ್ಲಿ ಕೊರೊನಾ ಮತ್ತಷ್ಟು ಉಲ್ಭಣಿಸುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಮಧ್ಯೆ ಭಾರತಕ್ಕೂ ಕೊರೊನಾ ಹರಡುವ ಆತಂಕ ಎದುರಾಗಿದ್ದು, ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ದೇಶದಲ್ಲಿ ಕೊರೊನಾ ಬಿಎಫ್.7 ನ ಹೊಸ ರೂಪಾಂತರದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಗುರುವಾರದಿಂದ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ವಿದೇಶದಿಂದ ಬರುವ ಪ್ರಯಾಣಿಕರಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಕರೋನ ಪರೀಕ್ಷೆಗಳು ಪ್ರಾರಂಭವಾಗಿವೆ.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕೇಂದ್ರ ಸೂಚಿಸಿದೆ. ಕೊರೊನಾ ಹೊಸ ರೂಪಾಂತರದ ಬಗ್ಗೆ ಭಯಪಡುವ ಅಗತ್ಯವಿಲ್ಲ ಮತ್ತು ಕೊರೊನಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ಸಾಕು ಎಂದು ಸ್ಪಷ್ಟಪಡಿಸಲಾಗಿದೆ. ಪ್ರತಿ ವಾರ ಕೊರೊನಾ ಪರಿಶೀಲನಾ ಸಭೆಗಳನ್ನು ನಡೆಸಲಾಗುವುದು ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದು ಹೇಳಿದೆ.
185 ಹೊಸ ಪ್ರಕರಣಗಳು :
ಗುರುವಾರದ ವರದಿಯಾಗಿತ್ತು ದೇಶದಲ್ಲಿ ಕೇವಲ 185 ಕರೋನಾ ಪ್ರಕರಣಗಳು ವರದಿಯಾಗಿವೆ. ವೈರಸ್‌ನಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಪ್ರಸ್ತುತ 3,402 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಇದುವರೆಗೆ 4.47 ಕೋಟಿ ಜನರು ವೈರಸ್‌ನಿಂದ ಬಳಲುತ್ತಿದ್ದರೆ, 5.31 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ.