ಚಿತ್ರದುರ್ಗ,(ಜ.21) : ನಗರದ ರೋಟರಿ ಬಾಲ ಭವನದಲ್ಲಿ ಆರೋಗ್ಯ ಇಲಾಖೆ, ರೋಟರಿ ಕ್ಲಬ್ ಮತ್ತು ರೋಟರಿ ಟ್ರಸ್ಟ್ ಸಹಯೋಗದೊಂದಿಗೆ ಕೋವಿಡ್ ಮುಂಜಾಗ್ರತಾ ವರಸೆಯ ಮಹಾಮೇಳ ಜರುಗಿತು.
ಡಾ.ಬಿ.ವಿ.ಗಿರೀಶ್ ತಾಲ್ಲೂಕು ಆರೋಗ್ಯಾಧಿಕಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಈ ಹಿಂದೆ ಕೋವ್ಯಾಕ್ಸಿನ್ 1 ನೇ ಮತ್ತು 2 ನೇ ವರಸೆ ಲಸಿಕೆ ಪಡೆದವರು 3 ನೇ ಮುಂಜಾಗ್ರತಾ ವರಸೆಯಾಗಿ ಕೋವ್ಯಾಕ್ಸಿನ್ ಲಸಿಕೆ ಪಡೆಯಿರಿ ಹಾಗೆಯೇ ಕೋವಿಶೀಲ್ಡ್ 1 ನೇ ಮತ್ತು 2 ನೇ ವರಸೆ ಲಸಿಕೆ ಪಡೆದವರು 3 ನೇ ಮುಂಜಾಗ್ರತಾ ವರಸೆಯಾಗಿ ಕೋವಿಶೀಲ್ಡ್ ಲಸಿಕೆ ಪಡೆಯಿರಿ.
ಲಸಿಕೆ ಪಡೆಯುವ ಮುನ್ನ ಈ ಹಿಂದೆ ಯಾವ ಲಸಿಕೆ ಪಡೆದಿದ್ದೇವೆ ಎಂದು ನೋಂದಣಿ ಘಟಕದಲ್ಲಿ ಖಚಿತ ಪಡೆಸಿಕೊಂಡು ನಂತರ ಲಸಿಕೆ ಪಡೆಯಿರಿ ಎಂದರು.
ಕಾರ್ಯಕ್ರಮದಲ್ಲಿ ಒಟ್ಟು 50 ಕೋವ್ಯಾಕ್ಸಿನ್ ಮುಂಜಾಗ್ರತಾ ವರಸೆ ಮತ್ತು 150 ಜನರಿಗೆ ಕೋವಿಶೀಲ್ಡ್ ಮುಂಜಾಗ್ರತಾ ವರಸೆ ಲಸಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರ್ ರೆಡ್ಡಿ, ರಂಗನಾಥ ರೆಡ್ಡಿ, ಮಂಜುನಾಥ, ಆರೋಗ್ಯ ಸುರಕ್ಷತಾಧಿಕಾರಿ ತಿಪ್ಪಮ್ಮ ರೋಟರಿ ಸದಸ್ಯರಾದ ಮಾಧುರಿ ಮಧು ಪ್ರಸಾದ್, ಜಯಶ್ರೀ ತರುಣ್ ಷಾ, ಗಾಯತ್ರಿ ಶಿವರಾಮ್, ಎಸ್.ವೀರೇಶ್, ಡಾ.ಸಿ.ತಿಪ್ಪೇಸ್ವಾಮಿ ಮತ್ತು ವೀರಭದ್ರಸ್ವಾಮಿ ಉಪಸ್ಥಿತರಿದ್ದರು.