ಕೊರೊನಾ ಸೋಂಕು ಹೆಚ್ಚಳ : ದೆಹಲಿಯಲ್ಲಿ ಜಾರಿಯಾಯ್ತು ನೈಟ್ ಕರ್ಫ್ಯೂ

ನವದೆಹಲಿ: ಕೊರೊನಾ ಸೋಂಕು ದಿನೇ ದಿನೇ ಎಲ್ಲೆಡೆ ಹೆಚ್ಚಳವಾಗುತ್ತಿದೆ. ಒಂದೇ ದಿನ 30 ಸಾವಿರಕ್ಕೂ ಹೆಚ್ಚು ಕೇಸ್ ಗಳು ದಾಖಲಾಗುತ್ತಿವೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಅಷ್ಟೇ ಅಲ್ಲ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಕೊರೋನಾ ತಗುಲಿರುವುದು ದೃಢವಾಗಿದೆ. ಈ ಬೆನ್ನಲ್ಲೇ ಕೊರೊನಾ ನಿಯಂತ್ರಣಕ್ಕೂ ದೆಹಲಿ ಸರ್ಕಾರ ವೀಕೆಂಡ್ ಕರ್ಫ್ಯೂ ಮೊರೆ ಹೋಗಿದೆ. ಶುಕ್ರವಾರ ರಾತ್ರಿ 10 ಗಂಟೆಗೆ ಆರಂಭವಾಗುವ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಜಾರಿಯಾಗಲಿದೆ.

ಕೊರೊನಾ ಸೋಂಕು ನೊಯಂತ್ರಕ್ಕೆ ಟಫ್ ರೂಲ್ಸ್ ತಂದಿರುವ ದೆಹಲಿ ಸರ್ಕಾರ ಅಗತ್ಯ ಸೇವೆಗಳನ್ನ ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗಳಿಗೂ ಕೂಡ ವರ್ಕ್ ಫ್ರಂ ಹೋಂ ಮಾಡೋದಕ್ಕೆ ಸೂಚನೆ ನೀಡಿದೆ.

ಈ ಬಗ್ಗೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾಹಿತಿ ನೀಡಿದ್ದು, ಸೋಂಕು ನಿಯಂತ್ರಣಕ್ಕೆ ತರಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಲ್ಲರು ಸಹಕಾರ ನೀಡಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *