ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು ಖುಷಿಯಿಂದ ಬರ ಮಾಡಿಕೊಂಡಿದ್ದಾರೆ. ಇಷ್ಟು ದಿನ ಹೊಳೆನರಸೀಪುರಕ್ಕೆ ಕೋರ್ಟ್ ಭವಾನಿ ಅವರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಇದೀಗ ಶುಕ್ರವಾರ ಆ ನಿರ್ಬಂಧವನ್ನು ತೆರವುಗೊಳಿಸಿದೆ. ಹೀಗಾಗಿ ತಮ್ಮ ಸ್ವಗೃಹಕ್ಕೆ ಹೋಗಿದ್ದಾರೆ.

ಈ ವೇಳೆ ಮಾತನಾಡಿದ ಭವಾನಿ ರೇವಣ್ಣ, ನಾನು ಬರ್ತಿರೋ ವಿಚಾರವನ್ನ ಯಾರಿಗೂ ತಿಳಿಸಿರಲಿಲ್ಲ. ಆದರೂ ಸಾಕಷ್ಡು ಜನ ಬಂದಿದ್ದಾರೆ. ಶುಕ್ರವಾರ ನನಗೆ ಕೋರ್ಟ್ ನಿಂದ ರಿಲ್ಯಾಕ್ಸ್ ಸಿಕ್ಕಿದ ಬಳಿಕ ಸಾಕಷ್ಟು ಜನ ಫೋನ್ ಮಾಡಿದ್ದರು. ಆದರೂ ಬರುವ ವಿಚಾರ ಯಾರಿಗೂ ತಿಳಿಸಿರಲಿಲ್ಲ. ಆದರೂ ಸಾಕಷ್ಟು ಜನ ಬಂದಿದ್ದಾರೆ. ಇಷ್ಟೊಂದು ಜನರನ್ನು ನೋಡಿ ನನಗೆ ಮುಜುಗರವಾಯ್ತು ಎಂದಿದ್ದಾರೆ ಭವಾನಿ ರೇವಣ್ಣ.

ಹಿರಿಸಾವೆಯಿಂದಾನೂ ಸಾಕಷ್ಟು ಜನ ನನ್ನ ಜೊತೆಗೆ ಬಂದಿದ್ದಾರೆ. ನಾನೀಗ ರಾಜಕೀಯದ ಬಗ್ಗೆ ಮಾತನಾಡಲ್ಲ. ನಾನು ಜನರಿಂದ ಯಾಕೆ ದೂರ ಉಳಿಯಲಿ..? ಅವರು ನನಗಾಗಿ ಸಾಕಷ್ಡು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರೊಟ್ಟಿಗೆ ಇದ್ದು ನಾನು ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ. ತುಂಬಾ ಸಂತೋಷವಾಗಿದೆ. ಜನರಿಗೆ ನಾನು ಋಣಿಯಾಗಿರ್ತೇನೆ. ದೇವೇಗೌಡರ ಕಾಲದಿಂದಾನೂ ಜನರು ಸಹಕಾರ ನೀಡಿದ್ದಾರೆ. ಹಾಗಾಗಿ ನನ್ನ ಕೈಲಾದಷ್ಟು ಸಹಾಯವನ್ನು ಅವರಿಗೆ ಮಾಡುತ್ತೇನೆ. ಹಾಸನದಿಂದ ಯಾವುದೇ ಕಾರಣಕ್ಕೂ ದೂರ ಉಳಿಯುವುದಿಲ್ಲ. ನಾನು ಇಲ್ಲಿಗೆ ಬಾರದೆ ಹೋದರು ಜನ ಅಲ್ಲಿಗೆ ಬಂದು ಮಾತನಾಡಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.


