ಚಿತ್ರದುರ್ಗ | ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಏಣಿಕೆ ಕಾರ್ಯ ಆರಂಭ

1 Min Read

ಚಳ್ಳಕೆರೆ, (ಏ.19): ತಾಲ್ಲೂಕಿನ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಏಣಿಕೆ ಕಾರ್ಯ ಆರಂಭವಾಗಿದ್ದು, ತಹಶೀಲ್ದಾರ್ ಎನ್.ರಘುಮೂರ್ತಿ, ದೇವಸ್ಥಾನದ ಆಡಳಿತಾಧಿಕಾರಿ ಗಂಗಾಧರಪ್ಪ, ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ  ಸಮ್ಮುಖದಲ್ಲಿ ಹುಂಡಿ ಬೀಗ ತೆಗೆದು ಹಣ ಏಣಿಕೆ ಕಾರ್ಯ ಪ್ರಾರಂಭಿಸಿದರು.

ಕಳೆದ ಮಾರ್ಚ್ 20 ರಂದು ನಡೆದಿದ್ದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ‌ದರ್ಶನ ಪಡೆದಿದ್ದರು. ಈ ವೇಳೆ ಭಕ್ತರು ನೀಡಿರುವ ಕಾಣಿಕೆ ಹಣ ಎಣಿಕೆ ಕಾರ್ಯ ಇಂದು (ಏಪ್ರಿಲ್ 19) ಆರಂಭವಾಗಿದೆ.

ಬೆಳಗ್ಗೆ 9.30 ಕ್ಕೆ ಆರಂಭವಾದ ಹುಂಡಿ ಏಣಿಕೆ ಕಾರ್ಯ, ಹೊರಮಠದಲ್ಲಿ ಏಣಿಕೆ ನಂತರ, ಒಳಮಠದ ದೇವಸ್ಥಾನದಲ್ಲಿ ಇದ್ದ ಎಲ್ಲಾ ಹುಂಡಿಗಳನ್ನು ತೆರವು ಮಾಡಿ ಹುಂಡಿಗಳನ್ನು ಏಣಿಕೆ ಕಾರ್ಯ ಮಾಡಲಾಯುತು‌. ದೇವಸ್ಥಾನದಲ್ಲಿ ಸಿಸಿ ಕ್ಯಾಮರ  ಹಾಗೂ ವಿಡಿಯೋ ಚಿತ್ರಕರಣದ ಮೂಲಕ ಹುಂಡಿ ಹಣ ತೆರೆಯಲಾಯುತು.

ಹಿರಿಯೂರು ದೇವಸ್ಥಾನದಲ್ಲಿ ಹುಂಡಿ ಹಣ ಕಳ್ಳತನಾದ ಹಿನ್ನೆಲೆಯಲ್ಲಿ ನಾಯಕಹಟ್ಟಿಯಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು.

ಕಾಣಿಕೆ ಹುಂಡಿಯಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪತ್ರಗಳ ಪತ್ರಗಳ ಬರೆದು ಪತ್ರಗಳನ್ನು ಹಾಕಲಾಗಿತ್ತು. ಇದರ ಜೊತೆಗೆ ಬೆಳ್ಳಿ ಪಾದುಕೆ, ತೊಟ್ಟಿಲು,  ಇತರೆ ಬೆಳ್ಳಿ ವಸ್ತುಗಳನ್ನು ಹುಂಡಿಯೊಳಗೆ ಹಾಕಿದ್ದರು.

ಪಾಪಿಯಿಂದ ಪಾಮರರವರೆಗೂ ಅಭಿಷ್ಟಗಳನ್ನು ಈಡೇರಿಸುವಂತಹ ಮಹಾದೈವ ಹಾಗೂ ಮಾಡಿದಷ್ಟು ನೀಡು ಭಿಕ್ಷೆ ನೀಡುವಂತಹ ಕರುಣಾಮಯಿ ನಾಯಕನಟ್ಟಿ ತಿಪ್ಪೇರುದ್ರಸ್ವಾಮಿ.

ತಮ್ಮ ಇಷ್ಟಾರ್ಥವನ್ನು ನೆರವೇರಿಸಲು ಭಕ್ತರು ಅನೇಕ ಮನವಿಗಳು ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾರೆ. ಹಲವಾರು ಭಕ್ತರು ಮದುವೆ, ನೌಎಕರಿ, ಆರ್ಥಿಕ ಸಂಕಷ್ಟ, ಸಂತಾನ, ಆರೋಗ್ಯ ಮುಂತಾದಂತಹ ಹಲವಾರು ಇಷ್ಟಾರ್ಥ ಈಡೇರಿಸುವಂತೆ ಮನವಿಗಳನ್ನು ಕಾಣಿಕೆ ಹುಂಡಿಗೆ ಸಲ್ಲಿಸಿದ್ದಾರೆ. ಸ್ವಾಮಿಯು ಎಲ್ಲರ ಕೋರಿಕೆಯನ್ನು ನೆರವೇರಿಸುತ್ತಾನೆಂಬ ಆಶಾಭಾವನೆ ಭಕ್ತರಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *