ಐಪಿಎಲ್ 2026ಕ್ಕೆ ಕೌಂಟ್‌ಡೌನ್ : ನಾಳೆಯಿಂದ ಟಿಕೆಟ್ ಮಾರಾಟ

ಬೆಂಗಳೂರು : ಬಹುನಿರೀಕ್ಷಿತ Indian Premier League (ಐಪಿಎಲ್) 19ನೇ ಆವೃತ್ತಿ ಮಾರ್ಚ್ 28ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣ ದಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ Royal Challengers Bengaluru ( ರಾಯಲ್ ಚಾಲೆಂಜರ್ಸ್ ಬೆಂಗಳೂರು) ಹಾಗೂ Sunrisers Hyderabad( ಸನ್ ರೈಸ್ ಹೈದರಾಬಾದ್) ತಂಡಗಳು ಮುಖಾಮುಖಿಯಾಗಲಿವೆ.

ಕಳೆದ ಬಾರಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಹಿನ್ನೆಲೆಯಲ್ಲಿ ಇಲ್ಲಿ ಪಂದ್ಯಗಳು ನಡೆಯುವುದಿಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೆ ಇದೀಗ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಉದ್ಘಾಟನಾ ಪಂದ್ಯ ನಡೆಯಲಿದ್ದು, ಆರ್‌ಸಿಬಿ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.

ಈ ಬಹು ನಿರೀಕ್ಷಿತ ಪಂದ್ಯಕ್ಕೆ ಟಿಕೆಟ್ ಮಾರಾಟ ನಾಳೆ (ಮಾರ್ಚ್ 22) ಬೆಳಗ್ಗೆ 9.17ರಿಂದ ಆರಂಭವಾಗಲಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಧಿಕೃತವಾಗಿ ಟಿಕೆಟ್‌ಗಳು ಆನ್‌ಲೈನ್ ಮೂಲಕ ಲಭ್ಯವಾಗಲಿವೆ ಎಂದು ತಿಳಿದುಬಂದಿದೆ.

ಸ್ಟ್ಯಾಂಡ್‌ವಾರು ಟಿಕೆಟ್ ದರಗಳು (ಪ್ರಾರಂಭಿಕ):
ಸನ್ ಫಾರ್ಮಾ ಎ ಸ್ಟ್ಯಾಂಡ್ – ₹2,300
ಹೆಚ್ ಅಪ್ಪರ್, ಡಿ ಕಾರ್ಪೊರೇಟ್, ಶಾಂತಾ ರಂಗಸ್ವಾಮಿ, ಬೋಟ್ ಸಿ, ಇ ಸ್ಟ್ಯಾಂಡ್ – ₹3,300
ರಾಹುಲ್ ದ್ರಾವಿಡ್ ಪ್ಲಾಟಿನಂ ಲೌಂಜ್ – ₹4,000
ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ (ಪಿ1 ಅನೆಕ್ಸ್) – ₹6,000
ಎಕ್ಸಿಕ್ಯೂಟಿವ್ ಲೌಂಜ್ / ಗ್ರಾಂಡ್ ಟೆರೇಸ್ – ₹10,000
ಪಿ ಟೆರೇಸ್ – ₹15,000
ಪಿ ಕಾರ್ಪೊರೇಟ್ – ₹20,000
ವೆಂಕಟೇಶ್ ಪ್ರಸಾದ್ ಸ್ಟ್ಯಾಂಡ್ ಪಿ4 – ₹25,000
ಜಿಆರ್ ವಿಶ್ವನಾಥ್ ಸ್ಟ್ಯಾಂಡ್ ಪಿ2 – ₹42,000
ಟಿಕೆಟ್ ಮಾರಾಟ ಆರಂಭದ ಕುರಿತ ಅಧಿಕೃತ ಪ್ರಕಟಣೆಗೆ ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.

Share This Article