ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ ,(ಮೇ.20) : ಚಿತ್ರದುರ್ಗ ತಾಲ್ಲೂಕು ಕಸಬಾ ಹೋಬಳಿ ದಳವಾಹಿಹಳ್ಳಿ ಗ್ರಾಮಕ್ಕೆ ಶನಿವಾರ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ಕೃಷಿ ಸಂಜೀವಿನಿ ವಾಹನವು ಭೇಟಿ ನೀಡಿ ಹತ್ತಿ ಬೆಳೆ ಪರಿಶೀಲಿಸಿದಾಗ ಸಸ್ಯ ಹೇನುಗಳು ಹಾಗೂ ಕರಿ ಜೀಗಿ ಹುಳುವಿನ ಬಾಧೆ ಕಂಡುಬಂದಿರುತ್ತದೆ.
ಜಿಲ್ಲೆಯಲ್ಲಿ ಪ್ರಸ್ತುತ ಹತ್ತಿ ಬೆಳೆಯು 30-60 ದಿನಗಳ ಬೆಳವಣಿಗೆ ಹಂತದಲ್ಲಿರುತ್ತದೆ. ಸಸ್ಯ ಹೇನುಗಳು ಹಾಗೂ ಕರಿ ಜೀಗಿ ಹುಳುವಿನ ಬಾದೆ ಚಿತ್ರದುರ್ಗ ತಾಲ್ಲೂಕಿನ ಕಸಬಾ ಹೋಬಳಿಯ ದಳವಾಹಿಹಳ್ಳಿ ಗ್ರಾಮ ಸೇರಿದಂತೆ ಸುತ್ತ-ಮುತ್ತ ಪ್ರದೇಶಗಳಲ್ಲಿ ಹಾಗೂ ಹತ್ತಿ ಬೆಳದಂತಹ ಉಳಿದ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಹ ಈ ಸಂದರ್ಭದಲ್ಲಿ ಕಂಡುಬರುವ ಸಾಧ್ಯತೆ ಇರುತ್ತದೆ.
ಈ ಹುಳುವಿನ ಹತೋಟಿಗಾಗಿ ಥಿಯಾಮೇಥಾಕ್ಸಮ್ 0.3 ಗ್ರಾಂ ಪ್ರತಿ ಲೀಟರ್ ಅಥವಾ ಪ್ಲೋನಿಕಮಿಡ್ 0.3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಈ ಹುಳುವಿನ ಬಾಧೆಯನ್ನು ಹತೋಟಿಗೆ ತರಬಹುದು ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರು ಹಾಗೂ ವಿಷಯ ತಜ್ಞರಾದ ಮಂಜುನಾಥಸ್ವಾಮಿ ರೈತ ಬಾಂದವರಿಗೆ ಸಲಹೆ ನೀಡಿದ್ದಾರೆ.