ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಅನ್ನ ಬಂಧಿಸಲಾಗಿದೆ. ಈ ಸಂಬಂಧ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಅವರನ್ನ ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ. ಈ ಸರ್ಕಾರ ನಾವು ಇದೇ ವಿಚಾರವನ್ನ ಸದನದಲ್ಲಿ ಪ್ರಸ್ತಾಪ ಮಾಡಿದಾಗ ಸಿಎಂ ಹೋಮ್ ಮಿನಿಸ್ಟರ್ ನಮ್ ಮೈಮೇಲೆ ಬಿದ್ರು. PSI ನೇಮಕಾತಿಯಲ್ಲಿ ಯಾವ ಭ್ರಷ್ಟಾಚಾರ ನಡೆದಿಲ್ಲ , ಅಕ್ರಮ, ಅವ್ಯವಹಾರ ನಡೆದಿಲ್ಲ ಎಂದು ಹೋಮ್ ಮಿನಿಸ್ಟರ್ ಅರಗ ಜ್ಞಾನೇಂದ್ರ ವೀರಾವೇಷದಿಂದ ಉತ್ತರಿಸಿದ್ದರು.
ಈಗ ಅದೇ ಹಗರಣದಲ್ಲಿ ನೇಮಕಾತಿ ಉಸ್ತುವಾರಿವಹಿಸಿದ್ದ ಅವರ ಇಲಾಖೆಯವರೇ ಆದ ಅಮೃತ್ ಪೌಲ್ ಅರೆಸ್ಟ್ ಆಗಿದಾರೆ. ಈಗೇನು ಹೇಳ್ತಾರೆ ಅವರು?. ಒಬ್ಬ ಜವಾಬ್ದಾರಿಯುತ ಮಂತ್ರಿಯಾಗಿ ಅವರ ಇಲಾಖೆಯಲ್ಲೇ ನಡೆದಿದೆ. ಈಗ ನಾವೇ ಅವರನ್ನ ಬಂಧಿಸಿದ್ದೇವೆ ಅಂತಾ ಬೆನ್ನು ತಟ್ಟಿಕೊಳ್ತಾ ಇದಾರೆ. ವಿಧಾನಸಭೆ ಮೂಲಕ ಆರೂವರೆ ಕೋಟಿ ಜನರಿಗೆ ಸುಳ್ಳು ಹೇಳಿದ ಅರಗ ಮಂತ್ರಿಯಾಗಿರಲು ಲಾಯಕ್ಕಾ..?
ಹಿಂದೆ ಅನೇಕ ಬಾರಿ ಇದೇ ರೀತಿ ಹೇಳಿದ್ದಾರೆ. ಆಗಲೂ ಸಹ ನಾನು ಆರಗರನ್ನ ಸಚಿವ ಸಂಪುಟದಿಂದ ಕಿತ್ತೊಗೆಯಲು ಹೇಳಿದ್ದೆ. ಸಿಎಂ ಅರಗ ಅಂತಹ ಮಂತ್ರಿ ಇಟ್ಟುಕೊಂಡು ಸುಳ್ ಹೇಳಿಸ್ತಾ ಇದಾರೆ. ಸರ್ಕಾರ ಈ ಪ್ರಕರಣ ಮುಚ್ಚಿಹಾಕಲು ಯತ್ನಿಸ್ತಾ ಇದೆ. ಸಿಐಡಿಯಿಂದ ನ್ಯಾಯ ಸಿಕ್ಕೊಲ್ಲ ಅಂತಾ ನಾನು ಹೇಳಿದ್ದೆ. ಇದರಲ್ಲಿ ದೊಡ್ ದೊಡ್ಡವರು, ಮಂತ್ರಿಗಳು ಇದಾರೆ. ಹೀಗಾಗಿ ನ್ಯಾಯಾಂಗ ತನಿಖೆಗೆ ಸದನದಲ್ಲಿ ಒತ್ತಾಯ ಮಾಡಿದ್ದೆ.
ಹೈಕೋರ್ಟ್ ಹಾಲಿ ನ್ಯಾಯಾಧಿಶರ ಮೇಲುಸ್ತುವಾರಿಯಲ್ಲಿ ತನಿಖೆ ಮಾಡಿ ಎಂದು ನೇ ೨೬ ರಂದು ಸಿಎಂ ಗೆ ಪತ್ರ ಬರೆದಿದ್ದೆ. ಆಗ ಮಾತ್ರ ಸತ್ಯ ಹೊರಬರಲು ಸಾಧ್ಯವಾಗುತ್ತೆ. ಆದರೆ ಸರ್ಕಾರ ನಾವು ಹೇಳಿದ ಹಾಗೇ ಮಾಡಿಲ್ಲ. ಮಂತ್ರಿ ಅಶ್ವಥ್ ನಾರಾಯಣ್ ಮೇಲೂ ಆರೋಪ ಮಾಡಿದ್ದಾರೆ. ಅವರು ಕಡೆಯವರು ಐವರು ಇದ್ದಾರೆ. ಅಂದರೆ ಸಚಿವ ಅಶ್ವಥ್ ನಾರಾಯಣ್ ವಿರುದ್ದ ಕ್ರಮ ಕೈಗೊಳ್ಳ ಬೇಕಲ್ಲ. ಸಿಐಡಿ ಅವರು ಅಶ್ವಥ್ ನಾರಾಯಣ್ ಅವರು ಕ್ರಮ ಕೈಗೊಳ್ತಾರಾ?.
ಓಎಮ್ ಆರ್ ಶೀಟ್ ಎಲ್ಲಾ ತಿದ್ದಿದ್ದಾರೆ. ಒಬ್ಬ ಅಭ್ಯರ್ಥಿಗೆ ಮೂವತ್ತು ಲಕ್ಷದಿಂದ ಒಂದು ಕೋಟಿವರೆಗೂ ತೆಗೆದುಕೊಂಡಿದ್ದಾರೆ. ಇದು ಯಾರ್ ಯಾರಿಗೆ ಹೋಗಿದೆ..ಯಾವ ಯಾವ ಮಂತ್ರಿಗೆ ಹೋಗಿದೆ.. ಮುಖ್ಯಮಂತ್ರಿಗೆ ಹೋಗಿದೆಯೋ ಇಲ್ವೋ ಅದೆಲ್ಲಾ ಗೊತ್ತಾಗಬೇಕಲ್ಲ. ಯಾರ ಜೇಬಿಗೆ ಹೋಗಿದೆ ಎಂಬುದು ಗೊತ್ತಾಗ ಬೇಕಲ್ಲ. ಇವರೆಲ್ಲರನ್ನು ಸಹ ಸಿಎಂ ರಕ್ಷಣೆ ಮಾಡ್ತಾ ಇದಾರೆ ಎಂದಿದ್ದಾರೆ.