ಭ್ರಷ್ಠಾಚಾರ ಮುಕ್ತ ಆಡಳಿತ ಆಮ್ ಆದ್ಮಿ ಪಕ್ಷದ ಮುಖ್ಯ ಉದ್ದೇಶ : ಎಎಪಿ ಜಿಲ್ಲಾಧ್ಯಕ್ಷ ಜಗದೀಶ್

2 Min Read

 

ವರದಿ ಮತ್ತು ಫೋಟೋ
                               ಸುರೇಶ್ ಪಟ್ಟಣ್,                                           ಮೊ :  8722022817

ಚಿತ್ರದುರ್ಗ,(ಅ.22) : ಕನಾಟಕದಲ್ಲಿ ಭ್ರಷ್ಠಾಚಾರ ಮುಕ್ತವಾದ ಆಡಳಿತವನ್ನು ನೀಡುವುದು ಆಮ್ ಆದ್ಮಿ ಪಕ್ಷದ ಮುಖ್ಯ ಉದ್ದೇಶವಾಗಿದೆ. ಇದರ ಅಂಗವಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಎಎಪಿಯ ಜಿಲ್ಲಾಧ್ಯಕ್ಷ ಜಗದೀಶ್ ತಿಳಿಸಿದರು.

ಹೂರವಲಯದ ತಮಟಕಲ್ಲು ಗ್ರಾಮದಲ್ಲಿ ಶನಿವಾರ ಅಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಎಎಪಿ ಪಕ್ಷದ ಗ್ರಾಮಾಂತರ ಪ್ರದೇಶದ ಸದಸ್ಯತ್ವ ನೊಂದಾಣಿ ಅಭಿಯಾನದಲ್ಲಿ ನೂತನ ಸದಸ್ಯರನ್ನು ನೊಂದಾಯಿಸಿ ಮಾತನಾಡಿದ ಅವರು, ದೆಹಲಿ ಮತ್ತು ಪಂಜಾಬ್‍ನಲ್ಲಿ ನಮ್ಮ ಪಕ್ಷ ಉತ್ತಮವಾದ ಅಡಳಿತವನ್ನು ನೀಡುತ್ತಿದೆ. ಇದೇ ರೀತಿಯ ಅಡಳಿತವನ್ನು ಮುಂದಿನ ದಿನದಲ್ಲಿ ಕನಾಟಕದಲ್ಲೂ ನೀಡಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಇದಕ್ಕೆ ಮತದಾರರ ಸಹಕಾರ ಅಗತ್ಯವಾಗಿದೆ ಎಂದರು.

ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಹಣವನ್ನು ನೀಡಿ ನಿಮ್ಮ ಮತವನ್ನು ಖರೀದಿ ಮಾಡುತ್ತಿದ್ದಾರೆ, ಇದರಿಂದ ಭ್ರಷ್ಠಾಚಾರ ಹೆಚ್ಚಾಗುತ್ತಿದೆ. ಮುಂದಿನ ದಿನದಲ್ಲಿ ನಿಮ್ಮ ಮತವನ್ನು ಹಣಕ್ಕೆ ಮಾರಿ ಕೊಂಡರೆ ಭ್ರಷ್ಠಾಚಾರ ಮತ್ತಷ್ಟು ಹೆಚ್ಚಾಗಲಿದೆ ಇದರಿಂದ ರಾಜ್ಯದ ಅಭಿವೃದ್ದಿ ಕುಂಠಿತವಾಗಲಿದೆ. ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಭ್ರಷ್ಠಾಚಾರ ರಹಿತವಾದ ಆಡಳಿತವನ್ನು ನೀಡಬೇಕೆನ್ನುವುದು ನಮ್ಮ ಉದ್ಧೇಶವಾಗಿದೆ. ಉಚಿತವಾದ ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್ ನೀಡಲಾಗುವುದು. ಚಿತ್ರದುಗ್ ವಿಧಾನ ಸಭಾ ಕ್ಷೇತ್ರದಲ್ಲಿ ಈ ರೀತಿಯಾದ ಕಾರ್ಯಕ್ರಮವನ್ನು ಮಾಡುವುದರ ಮೂಲಕ ನಮ್ಮ ಪಕ್ಷದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದೆಂದು ಜಗದೀಶ್ ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀ ನಾರಾಯಣ್ ರೆಡ್ಡಿ ಮಾತನಾಡಿ, ಈಗಿನ ಸರ್ಕಾರಗಳು ಜನರಿಗೆ ವಿವಿಧ ರೀತಿಯಲ್ಲಿ ತೆರಿಗೆಯನ್ನು ಹಾಕುವುದರ ಮೂಲಕ ಹಣವನ್ನು ವಸೂಲಿ ಮಾಡುತ್ತಿದೆ ಇದು ಬಡವರಿಗೆ ಹೂರೆಯಾಗಿದೆ. ಆದರೆ ಇದರ ಬಗ್ಗೆ ಯಾರು ಸಹಾ ಮಾತನಾಡುತ್ತಿಲ್ಲ, ಸುಮ್ಮನೆ ಸಹಿಸಿಕೊಂಡಿದ್ದಾರೆ ಮುಂಬರುವ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠವನ್ನು ಮತದಾರರು ಕಲಿಸಲಿದ್ದಾರೆ. ಎಎಪಿ ಪಕ್ಷದಲ್ಲಿ ಯಾವುದೇ ಜಾತಿ ರಾಜಕೀಯ ಇಲ್ಲ ಇಲ್ಲಿ ಎಲ್ಲರು ಸಮಾನರು, ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುವುದರ ಮೂಲಕ ಜನತೆಗೆ ಪಕ್ಷದ ಕಾರ್ಯ ವೈಖರಿಯ ಬಗ್ಗೆ ತಿಳಿಸಲಾಗುವುದು ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನೋಹರ್ ಮಾತನಾಡಿ, ವಿವಿಧ ರಾಜಕೀಯ ಪಕ್ಷಗಳು ಹಣವನ್ನು ಸುರಿಯುವುದರ ಮೂಲಕ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಅದರೆ ನಮ್ಮ ಪಕ್ಷದವರು ಜನತೆಗೆ ಉತ್ತಮವಾದ ಆಡಳಿತವನ್ನು ನೀಡುವ ಭರವಸೆಯನ್ನು ನೀಡುವುದರ ಮೂಲಕ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಪ್ರತಿ ಬೂತ್ ನಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡುವುದರ ಮೂಲಕ ಪಕ್ಷವನ್ನು ಭದ್ರ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಫಾರೂಕ್ ಆಲಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರಾಧಾ, ಜಿಲ್ಲಾ ಕಾರ್ಯದರ್ಶಿ ಕರಿಬಸಪ್ಪ, ಹಿಂದುಳಿದ ಘಟಕದ ಅಧ್ಯಕ್ಷ ಜಾಮೀರ್ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *