Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭ್ರಷ್ಟಾಚಾರ ರಹಿತ ಆಡಳಿತ ನಮ್ಮ ಧ್ಯೇಯ : ಮಾಜಿ ಸಚಿವ ಎಚ್.ಆಂಜನೇಯ

Facebook
Twitter
Telegram
WhatsApp

ಹೊಳಲ್ಕೆರೆ (ಏ.28) : ಹೊಳಲ್ಕೆರೆ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಎಂ.ಚಂದ್ರಪ್ಪನ ಕೊಡುಗೆ ಶೂನ್ಯವಾಗಿದ್ದು, ಭ್ರಷ್ಟಾಚಾರ ರಹಿತ ಆಡಳಿತ ನಮ್ಮ ಧ್ಯೇಯ ಎಂದು ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಹೇಳಿದರು.

ತಾಲೂಕಿನ ಅಮೃತಾಪುರ, ಚಿತ್ರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಮತಪ್ರಚಾರ ನಡೆಸಿದ ಸಂದರ್ಭ ಮಾತನಾಡಿದ ಅವರು, ಇಂದಿನ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ  ಶಾಸಕ ಎಂ.ಚಂದ್ರಪ್ಪ ಕ್ಷೇತ್ರಕ್ಕೆ ಯಾವುದೇ ಗುರುತರವಾದ ಅಭಿವೃದ್ದಿ ಕೆಲಸ ಮಾಡಿಲ್ಲ. ತನ್ನ ಸ್ವಹಿತಕ್ಕಾಗಿ ಭ್ರಷ್ಟಾಚಾರ ಮಾಡಿದ್ದೆ ಕ್ಷೇತ್ರಕ್ಕೆ ನೀಡಿದ ದೊಡ್ಡ ಕೊಡುಗೆ ಎಂದರು.

ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಪಿಎಸ್‍ಐ ಹಗರಣ, 40 ಫರ್ಸೆಂಟ್ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪೆಟ್ರೊಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳ, ನಿರುದ್ಯೋಗ ಸಮಸ್ಯೆ ತಲೆದೂರಿದೆ. ಇದನ್ನು ಪರಿಹರಿಸಲು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಭ್ರಷ್ಟಾಚಾರ ರಹಿತ ಆಡಳಿತ ನಡೆಸಲಿದೆ ಎಂದರು.

ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಭ್ರಷ್ಟಾಚಾರದ ಆಡಳಿತದಿಂದ ಹೊಳಲ್ಕೆನಡೆಸಿ್ಷೇತ್ರದ ಪ್ರಗತಿ ಸಂಪೂರ್ಣ ಹಿಂದುಳಿದಿದೆ. ಬಡ ಜನಸಾಮಾನ್ಯರಿಗೆ ಒಂದೂ ವಸತಿ ಕಲ್ಪಿಸದೇ, ಬದುಕು ಬೀದಿಗೆ ಬಿದ್ದಿದ್ದಾರೆ ಎಂದು ಶಾಸಕ ಎಂ.ಚಂದ್ರಪ್ಪನ ದುರಾಡಳಿತದ ವಿರುದ್ಧ ಕಿಡಿಕಾರಿದರು.

2013ರಲ್ಲಿ ಕ್ಷೇತ್ರದಿಂದ ಆಯ್ಕೆಯಾದ್ದ ಎಚ್.ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕ್ಷೇತ್ರದಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ್ದರು. ಆದರೂ ಸಹ ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಆಧಿಕಾರಕ್ಕೆ ಬಂದ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಕೆರೆ, ರಸ್ತೆ ನಿರ್ಮಾಣದಲ್ಲಿ ಕೋಟಿಗಟ್ಟಲೆ ಭ್ರಷ್ಟಾಚಾರ ಮಾಡಿ ಜನರಿಗೆ ಅನ್ಯಾಯ ಮಾಡಿದ್ದಾರೆ.

ಪ್ರತೀ ಬಾರಿಯೂ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಹೀಗಾಗಿ ಈ ಬಾರಿ ಕ್ಷೇತ್ರದ ಮತದಾರ ಎಚ್.ಆಂಜನೇಯರವರನ್ನು ಬಹುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಇಡೀ ದೇಶದಲ್ಲಿಯೇ ಕಡು ಬಡವರ ಉದ್ದಾರಕ್ಕೆ ಶ್ರಮಿಸಿದೆ. ಮಾಜಿ ಸಚಿವ ಎಚ್.ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ  ಹೊಳಲ್ಕೆರೆ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಿದ್ದರು. ಆಂಜನೇಯ ಅವರು ಫಲಾಪೇಕ್ಷೆ ಇಲ್ಲದೇ ತನ್ನ ಅಧಿಕಾರದ ನಿರ್ವಹಣೆ ಮಾಡಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಜಿಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಪುರಸಭೆ ಸದಸ್ಯ ವಿಜಯಸಿಂಹ ಖಾಟ್ರೋತ್, ಕೆಪಿಸಿಸಿ ಒಬಿಸಿ ವಿಭಾಗದ ರಾಜ್ಯ ಉಪಾಧ್ಯಕ್ಷ ಕಿರಣ್‍ಕುಮಾರ್‍ಯಾದವ್, ಕೆಪಿಸಿಸಿ ಸಂಯೋಜಕ ಲೋಕೇಶ್‍ನಾಯ್ಕ್, ನಗರ ಘಟಕದ ಅಧ್ಯಕ್ಷ ಮಜರ್ ಉಲ್ಲಾಖಾನ್, ಮುಖಂಡರಾದ ಗೋಡೇಮನೆ ಹನುಮಂತಪ್ಪ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೆಚ್.ಡಿ.ರಂಗಯ್ಯ, ಭೋವಿ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಬಾಣಗೆರೆ ಮಂಜುನಾಥ್, ಕೆ.ಸಿ.ಪುರುಷೋತ್ತಮ್, ವೈಶಾಖ್ ಯಾದವ್ ಉಪಸ್ಥಿತರಿದ್ದರು.

ನಾಳೆ ಮಾಜಿ ಸಚಿವೆ ಚಲನಚಿತ್ರನಟಿ ಉಮಾಶ್ರೀ ರೋಡ್ ಶೋ :

ಮಾಜಿ ಸಚಿವೆ, ಚಲನಚಿತ್ರ ಹಿರಿಯ ನಟಿ ಉಮಾಶ್ರೀ ಅವರು ಏ.30 ರಂದು ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಪರ ರೋಡ್ ಶೋ ಮೂಲಕ ಬೆಳಗ್ಗೆ 11  ಗಂಟೆಗೆ  ಎಚ್.ಡಿ.ಪುರ, ಮಧ್ಯಾಹ್ನ 12-30 ಗಂಟೆಗೆ ಚಿಕ್ಕಜಾಜೂರು, ಮಧ್ಯಾಹ್ನ 2 ಗಂಟೆಗೆ ಮಲ್ಲಾಡಿಹಳ್ಳಿ, ಸಂಜೆ  4  ಗಂಟೆಗೆ ರಾಮಗಿರಿಯಲ್ಲಿ ರೋಡ್ ಶೋ ಮೂಲಕ ಮತಯಾಚಿಸಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ,

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..! ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್

error: Content is protected !!