ಕೋಲಾರ: ಇತ್ತೀಚೆಗೆ ರಾಜ್ಯದಲ್ಲಿ ಅವ್ಯಹಾರ, ಭ್ರಷ್ಟಾಚಾರದ ವಿಚಾರಗಳು ಬಟಾಬಯಲಾಗುತ್ತಿವೆ. ಸಾಕಷ್ಟು ಇಲಾಖೆಗಳಲ್ಲಿ ಅವ್ಯವಹಾರ ಬಡೆದಿರುವುದು ಬೆಳಕಿಗೆ ಬಂದಿದೆ. ಇದೀಗ ಕೋಚಿಮುಲ್ ನಲ್ಲೂ 6 ಕೋಟಿ ಅವ್ಯವಹಾರದ ವಾಸನೆ ಹೊಡೆಯುತ್ತಿದೆ. ಅದರಲ್ಲೂ ಒಂದಲ್ಲ ಎರಡಲ್ಲ 6 ಕೋಟಿ ರೂಪಾಯಿ ಅವ್ಯವಹಾರವಾಗಿದೆ ಎಂದು ನಿರ್ದೇಶಕರೇ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಕೇಂದ್ರವೆಂದರೆ ಅದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಘಟಕ. ದಿನವೊಂದಕ್ಕೆ ಲಕ್ಷಗಟ್ಟಲೇ ಲೀಟರ್ ಹಾಲು ಇಲ್ಲಿಂದ ಸರಬರಾಜು ಆಗುತ್ತದೆ. ಅಷ್ಟೇ ಅಲ್ಲ ಹಾಲಿನ ಪ್ರಾಡೆಕ್ಟ್ ಗಳ ಉತ್ಪಾದನೆಯಲ್ಲೂ ಮುಂದೆ ಇದೆ. ಆದರೆ ಇದೀಗ ಘಟಕದೊಳಗೆ ಅವ್ಯವಹಾರವಾಗಿರುವ ಬಗ್ಗೆ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.
ಟೆಟ್ರಾಪ್ಯಾಕ್ ನಲ್ಲಿ ಸುಮಾರು6 ಕೋಟಿಯಷ್ಟು ಅವ್ಯವಹಾರವಾಗಿದೆ ಎಂದು ನಿರ್ದೇಶಕ ಮಂಜುನಾಥ್ ರೆಡ್ಡಿ ಆರೋಪಿಸಿದ್ದಾರೆ. ಆದರೆ ಈ ಆರೋಪ ಸತ್ಯಕ್ಕೆ ದೂರವಾಗಿರುವುದು ಎಂದು ಅಧ್ಯಕ್ಷರಾಗಿರುವ ಶಾಸಕ ನಂಜೇಗೌಡ ಹೇಳಿದ್ದಾರೆ. ಹಾಗಾದರೆ ಘಟಕದ ಜವಬ್ದಾರಿ ನೋಡಿಕೊಳ್ಳುವ ನಿರ್ದೇಶಕರು ಸುಳ್ಳು ಹೇಳುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಅದರಲ್ಲೂ ಒಂದಲ್ಲ ಎರಡಲ್ಲ ಆರು ಕೋಟಿ ಅವ್ಯವಹಾರವಾಗಿದೆ ಎನ್ನುತ್ತಿದ್ದಾರೆ. ಇಷ್ಟು ದೊಡ್ಡ ಮಟ್ಟದ ಆರೋಪ ಸಾಕ್ಷ್ಯಗಳಿಲ್ಲದೆ ಮಾಡಿರಯವುದಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.