ಬೆಂಗಳೂರು: ಕೊರೊನಾ ಟಫ್ ರೂಲ್ಸ್, ವೀಕೆಂಡ್ ಕರ್ಫ್ಯೂ ಇದ್ದಾಗಲೇ ಕಾಂಗ್ರೆಸ್ ನಾಯಕರು ಜನವರಿ 9 ರಂದು ಮೇಕೆದಾಟು ಯೋಜನೆಗೆ ಚಾಲನೆ ನೀಡಿದರು.ವಿಂದಿಗೆ ಪಾದಯಾತ್ರೆಗೆ ಐದು ದಿನ ತುಂಬಿದೆ. ಹನ್ನೊಂದು ದಿನ ಮಾಡಬೇಕೆಂಬ ಹಠ ತೊಟ್ಟಿದ್ದರು ಕಾಂಗ್ರೆಸ್ ನಾಯಕರು.
ರಾಜ್ಯದಲ್ಲೂ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೆ ಇದೆ. ಪಾದಯಾತ್ರೆಯ ಮೂಲಕ ಇನ್ನಷ್ಟು ಸೋಂಕು ಹೆಚ್ಚಾಗುತ್ತೆ ಎಂಬ ಆತಂಕ ಮನೆ ಮಾಡಿದೆ. ಈಗಾಗಲೇ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಪಾದಯಾತ್ರೆಗೆ ಮೊದಲ ದಿನ ಚಾಲನೆ ನೀಡಿ, ಸ್ವಲ್ಪ ದೂರ ನಡೆದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊರೊನಾ ಸೋಂಕು ಹರಡಿದೆ. ಜ್ವರ ಇದೆ ಎನ್ನಲಾಗಿದೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೂಡ ಜ್ಚರದಿಂದ ಬಳಲುತ್ತಿದ್ದು, ಅವರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜೊತೆಗೆ ಮಾಜಿ ಮೇಯರ್ ಗಂಗಾಂಬಿಕೆ, ಮಂಜುಳಾ ಮಾನಸ ಸೇರಿದಂತೆ ಹಲವರಿಗೆ ಸೋಂಕು ಹರಡಿದೆ.