ಬೆಂಗಳೂರು: ಕೊರೊನಾ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಅದರಲ್ಲೂ ಬಿಜೆಪಿ ನಾಯಕರಲ್ಲೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೀಗ ಕಾನೂನು ಸಚಿವ ಮಾಧುಸ್ವಾಮಿಗೂ ಸೋಂಕು ದೃಢಪಟ್ಟಿದೆ.
ಕೊರೊನಾ ದೃಢಪಟ್ಟಿರುವ ಮಾಹಿತಿ ನೀಡಿರುವ ಮಾಧುಸ್ವಾಮಿ, ಸದ್ಯ ಹೋಂ ಐಸೋಲೇಟ್ ಆಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಾಗಲೇ ಬಿಜೆಪಿಯಲ್ಲಿ ಸಚಿವ ಆರ್ ಅಶೋಕ್, ನಳೀನ್ ಕುಮಾರ್ ಕಟೀಲ್, ಶಿಕ್ಷಣ ಸಚಿವ ನಾಗೇಶ್ ಸೇರಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಬೆನ್ನಲ್ಲೇ ಇದೀಗ ಸಚಿವ ಮಾಧುಸ್ವಾಮಿ ಅವರಲ್ಲಿಯೂ ಸೋಂಕು ಪತ್ತೆಯಾಗಿದೆ.