ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಕಠಿಣ ನಿಯಮಗಳನ್ನ ಜಾರಿ ಮಾಡಲಾಗಿದೆ.
ಸಭೆ ಬಳಿಕ ಮಾತನಾಡಿದ ಸಚಿವ ಆರ್ ಅಶೋಕ್, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೊವಿಡ್ ಸಭೆ ಮಾಡಿದ್ದೆವು. ಸುಧಾಕರ್, ಅಶ್ವಥ್ ನಾರಾಯಣ್, ತಜ್ಞರ ತಂಡ, ಅಧಿಕಾರಿಗಳು ಭಾಗಿಯಾಗಿದ್ರು. ಸಿಎಂ ಏನೇ ನಿರ್ಧಾರ ತೆಗೆದುಕೊಂಡ್ರು ಅದಕ್ಕೆ ನಮ್ಮ ನೆರೆಯ ಜಿಲ್ಲೆಗಳಲ್ಲಿ ತೆಗೆದುಕೊಂಡ ಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ.
ಓಮಿಕ್ರಾನ್ ಐದು ಒಟ್ಟು ಹೆಚ್ಚಾಗಿದೆ ಅಂತ ವರದಿ ಬಂದಿದೆ. ಇಂದು 3,140 ಕೇಸ್, ಓಮಿಕ್ರಾನ್ 147 ಕೇಸ್ ಆಗಿದೆ. ಕಳೆದ ಎರಡು ದಿನದಲ್ಲಿ ಡಬಲ್ ಆಗ್ತಿದೆ. ಆರು ಸಾವಿರ, ಒಂಭತ್ತು ಸಾವಿರ ಆಗ್ತಿದೆ. ಐದು ಸಾವಿರ ಕೇಸ್ ಬರುವ ಸಾಧ್ಯತೆ ಇದೆ. ಬೆಂಗಳೂರಿಗೆ ಒಂದು ರೂಲ್ಸ್ ತರಲು ನಿರ್ಧಾರ ಮಾಡಲಾಗಿದೆ. 90ರಷ್ಟು ಮೆಟ್ರೋ ಸಿಟಿಯಲ್ಲೇ ಕೇಸ್ ಆಗ್ತಿದೆ. ಇದನ್ನ ಗಮನದಲ್ಲಿಟ್ಟುಕೊಂಡಿದ್ದೇವೆ. ಯುಎಸ್ ನಲ್ಲೂ ಕೂಡ ಐದು ಕೋಟಿ ಆಕ್ಟೀವ್ ಕೇಸ್ ಇದೆ.
ನಮ್ಮಲ್ಲೂ 3% ಕೇಸ್ ದಾಖಲಾಗಿದೆ. 20-50 ವರ್ಷದವರಿಗೆ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. 10-12 ನೇ ತರಗತಿ ಹೊರತುಪಡಿಸಿ, 1-9 ಆಫ್ ಲೈನ್ ಕ್ಲಾಸ್ ಬಂದ್. ನಾಳೆಯಿಂದಲೇ ಹೊಸ ಮಾರ್ಗಸೂಚಿ ಜಾರಿಯಾಗಲಿದೆ. ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ವಿಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಸರ್ಕಾರಿ ಕಚೇರಿ ಕೇಂದ್ರದ ಮಾರ್ಗಸೂಚಿ ಅನ್ವಯವಾಗುತ್ತೆ.
ಮಾಲ್, ಸಿನಿಮಾ, ಪಬ್, ಬಾರ್, ಜಿಮ್ 50% ಮಾತ್ರ ನೀಡಿದ್ದು, ಈ ಕಡೆ ಭೇಟಿ ನೀಡುವವರಿಗೆ 2ಡೋಸ್ ಕಡ್ಡಾಯವಾಗಿರಬೇಕು. ಮದುವೆ ಹೊರಾಂಗಣ 200_ ಒಳಾಂಗಣ 100 ಜನರಿಗೆ ಮಾತ್ರ ಅವಕಾಶ. ನಾಳೆ ಹತ್ತು ಗಂಟೆಯಿಂದ ನಿಯಮ ಜಾರಿಯಾಗಲಿದೆ ಎಂದಿದ್ದಾರೆ.