ಬೆಂಗಳೂರು: ಕಳೆದ ಎರಡು ವರ್ಷಗಳ ಕಾಲ ಶಾಲಾ ಕಾಲೇಜಿನ ದರ್ಶನವೇ ಇಲ್ಲದೆ ಮಕ್ಕಳ ಶಿಕ್ಷಣ ಕುಂಠಿತವಾಗಿದೆ. ಹಾಗೋ ಹೀಗೋ ಕೊರೊನಾ ಕಂಟ್ರೋಲ್ ಗೆ ಬಂತು ಅಂತ ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಎಲ್ಲವನ್ನು ಶುರು ಮಾಡಿ ಆಗಿದೆ. ಆದ್ರೆ ಈಗ ಮತ್ತೆ ಬೇರೆ ಬೇರೆ ದೇಶಗಳಲ್ಲಿ ಕೊರೊನಾ ಹೆಚ್ಚಳವಾಗ್ತಾ ಇದೆ. ರಾಜ್ಯದಲ್ಲೂ ಅಲ್ಲೊಂದು ಇಲ್ಲಿಂದು ಅಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಒಂದು ಮತ್ತೆ ಎಲ್ಲಿ ಲಾಕ್ಡೌನ್ ಮಾಡ್ತಾರೋ ಅನ್ನೋ ಭಯ ಮಧ್ಯಮ ಹಾಗೂ ಬಡ ವರ್ಗದವರನ್ನ ನೋವಿಗೆ ಸಿಲುಕಿಸಿದೆ. ಮತ್ತೊಂದು ಮಕ್ಕಳಿಗೆ ಮತ್ತೆ ಶಿಕ್ಷಣದ ಕೊರತೆ ಎದುರಾಗುತ್ತಾ ಅನ್ನೋ ಆತಂಕ ಪೋಷಕರಲ್ಲಿ ಮನೆ ಮಾಡಿದೆ. ಶಾಲಾ ಕಾಲೇಜು ವಂದ್ ಮಾಡುವ ಬಗ್ಗೆ ಸಚಿವ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯಕ್ಕೆ ಶಾಲಾ ಕಾಲೇಜು ಬಂದ್ ಮಾಡುವ ಯಾವುದೇ ಯೋಚನೆ ಇಲ್ಲ. ಪೋಷಕರು ಭಯ ಪಡುವ ಅಗತ್ಯವಿಲ್ಲ. ಶಾಲೆ ಮುಚ್ಚುವ ಯಾವ ನಿರ್ಧಾರವೂ ಸರ್ಕಾರದ ಮುಂದಿಲ್ಲ. ಕೊರೊನಾ ಹೆಚ್ಚಾದರೇ ಸರ್ಕಾರದ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುತ್ತೇವೆ. ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆಯ ಸಂಪರ್ಕದಲ್ಲಿದೆ ಎಂದಿದ್ದಾರೆ.
ಮೂರನೆ ಅಲೆಯ ಭಯ ಎಲ್ಲರಲ್ಲೂ ಕಡಿಮೆಯಾಗಿತ್ತು. ಲಸಿಕೆ ಪಡೆದಿರಯವುದರಿಂದ ಮೂರನೆಯ ಅಲೆ ಅಷ್ಟಾಗಿ ಎಫೆಕ್ಟ್ ಆಗಲ್ಲ ಎಂದೇ ಹೇಳಲಾಗಿತ್ತು. ಅದೇ ಧೈರ್ಯದಲ್ಲಿ ಮಕ್ಕಳನ್ನ ಶಾಲೆಗೆ ಕಳುಹಿಸಲಾಗುತ್ತಿತ್ತು. ಆದ್ರೆ ಈಗ ಮತ್ತೆ ಮೂರನೆ ಅಲೆ ಬರುವ ಆತಂಕ ಹೆಚ್ಚಾಗುತ್ತಿದೆ. ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಬೇಕಾ ಬೇಡವಾ ಎಂಬ ಗೊಂದಲದಲ್ಲಿದ್ದಾರೆ.