ಬೆಂಗಳೂರು: ಕೊರೊನಾದಿಂದಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಸಾಕಷ್ಟು ಕುಂಠಿತವಾಗಿದೆ. ಇದು ಮಕ್ಕಳ ಭವಿಷ್ಯಕ್ಕೂ ಉತ್ತಮವಾದುದ್ದಲ್ಲ. ಇದನ್ನ ಅರಿತಿದ್ದೇ ಸರ್ಕಾರ ಶಾಲೆಗಳನ್ನ ಶುರು ಮಾಡಿದೆ. ಆದ್ರೆ ಶುರುವಾದ ಕೆಲವೇ ತಿಂಗಳಲ್ಲಿ ಇದೀಗ ಕೊರೋನಾ ಹಬ್ಬುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಪೋಷಕರು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದಾರೆ. ಜೊತೆಗೆ ಶಾಲೆ-ಕಾಲೇಜು ಮುಚ್ತಾರಾ ಅನ್ನೋ ಗೊಂದಲದಲ್ಲಿದ್ದಾರೆ. ಅದಕ್ಕೆ ಈಗಾಗ್ಲೇ ಸಚಿವ ನಾಗೇಶ್ ಅವರು ಸ್ಪಷ್ಟ ಉತ್ತರವನ್ನು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಶಾಲೆಗಳನ್ನ ಮುಚ್ಚಲ್ಲ ಎಂದು.
ಆದ್ರೆ ವಸತಿ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ತರಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ನಾಗೇಶ್, ವಸತಿ ಶಾಲೆಗಳಲ್ಲಿ ಮಕ್ಕಳಿ ಹಾಗೂ ಶಿಕ್ಷಕರಿಗೆ ಕೊರೊನಾ ಹೆಚ್ಚಳವಾಗುತ್ತಿದೆ. ಈಗಾಗಲೇ ಅಲ್ಲಿನ ಆಡಳಿತಾಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದ್ದೇವೆ. ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಿ ಎಂದಿದ್ದೇವೆ. ಸೋಂಕು ನಿಯಂತ್ರಣ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕೂ ಸೂಚನೆ ನೀಡಲಾಗಿದೆ. ಶಾಲಾ ಕಾಲೇಜು ಬಂದ್ ಮಾಡುವುದು ಬೇಡವೆಂದು ತಜ್ಞರು ತಿಳಿಸಿದ್ದಾರೆ.
ಶಾಲೆ ಬಂದ್ ಮಾಡಿ ಆನ್ಲೈನ್ ಕ್ಲಾಸ್ ಮಾಡುವುದರಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಯೂ ಕುಂಠಿತವಾಗುತ್ತದೆ. ಆನ್ಲೈನ್ ಕ್ಲಾಸ್ನಲ್ಲಿ ಮಕ್ಕಳಿಗೆ ಅಷ್ಟಾಗಿ ಅರ್ಥವಾಗುವುದಿಲ್ಲ. ಶಾಲೆ ಮುಚ್ಚುವುದು ಬೇಡ. ಕೊರೋನಾ ತಡೆಯಲು ಮಾರ್ಗಸೂಚಿಗಳನ್ನ ಅನುಸರಿಸಲು ಶಾಲೆಗಳಿಗೆ ತಿಳಿಸಿಲಾಗಿದೆ. ನಾನು ಕೂಡ ಡಿಸೆಂಬರ್ 10ರ ನಂತರ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದಿದ್ದಾರೆ.