ಬೆಂಗಳೂರು: ಜನ ಈಗಲೇ ಸಾಕಷ್ಟು ಭಯದಲ್ಲಿ ಬದುಕ್ತಾ ಇದ್ದಾರೆ. ಈಗಾಗ್ಲೇ ವೀಕೆಂಡ್ ಕರ್ಫ್ಯೂ, ಟಫ್ ರೂಲ್ಸ್ ಅಂತ ಹೇರಲಾಗಿದೆ. ಈ ಮಧ್ಯೆ ಲಾಕ್ಡೌನ್ ಏನಾದ್ರೂ ಮಾಡಿದ್ರೆ ಜೀವನ ಹೇಗೆ ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ.
ಇದೀಗ ಸಚಿವ ಸುಧಾಕರ್ ಈ ಬಗ್ಗೆ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಲಾಕ್ಡೌನ್ ಮೂಲಕ ಕೊರೊನಾ ನಿಯಂತ್ರಿಸುವುದು ಸರಿಯಲ್ಲ ಎಂದಿದ್ದಾರೆ.
ಓಮಿಕ್ರಾನ್ ತಡೆಗೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೇವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡಲ್ಲ. ಲಾಕ್ಡೌನ್ ನಿಂದಾಗಿ ಕೊರೊನಾ ನಿಯಂತ್ರಿಸೋದಕ್ಕೆ ಸಾಧ್ಯವಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ಒಮಿಕ್ರಾನ್ ಹೆಚ್ಚಳವಾಗಬಹುದು ಎಂದಿದ್ದಾರೆ.
ಒಂದೇ ವಾರದಲ್ಲಿ ಸೋಂಕು ಕಡಿಮೆಯಾಗಲ್ಲ. ನಿತ್ಯವೂ ಅಧಿಕಾರಿಗಳು, ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಡಿಸಿಗಳ ಜೊತೆ ಸಭೆ ನಡೆಸುತ್ತಿದ್ದೇವೆ. ಒಮಿಕ್ರಾನ್ 5-6 ಪಟ್ಟು ವೇಗವಾಗಿ ಹರಡುತ್ತಿದೆ. ಸೋಂಕು ನಿಯಂತ್ರಣಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಲಾಕ್ಡೌನ್ ಅಂತು ಮಾಡಲ್ಲ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.