ಕುಕ್ಕರ್ ಬಾಂಬ್ ಸ್ಪೋಟ : ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ವಿಚಾರಣೆ..!

suddionenews
1 Min Read

ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಈ ಸಂಬಂಧ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಅವರನ್ನು ವಿಚಾರಣೆ ನಡೆಸಿದೆ. ಶಾರೀಖ್ ಅಜ್ಜನಿಗೆ ಸಂಬಂಧಿಸಿದ ಜಾಗದಲ್ಲಿ ಕಾಂಗ್ರೆಸ್ ಕಚೇರಿಯನ್ನು ತೆರೆಯಲಾಗಿದೆ. ಹೀಗಾಗಿ ಇಡಿ ಅಧಿಕಾರಿಗಳು ದಿಢೀರನೆ ಕಿಮ್ಮನೆ ರತ್ನಾಕರ್ ಅವರ ಕಚೇರಿಗೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ.

ಈ ಕಚೇರಿಯನ್ನು ಆರಂಭಕ್ಕೂ ಮುನ್ನವೇ ಕಿಮ್ಮನೆ ರತ್ನಾಕರ್ ಅವರ ಸಂಬಂಧಿಕರ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಲಾಗಿತ್ತಂತೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಇಡಿ ಅಧಿಕಾರಿಗಳು, ತನಿಖೆಗಾಗಿ ಕಿಮ್ಮನೆ ಅವರ ಕಚೇರಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ಪ್ರತಿ ತಿಂಗಳು 10 ಸಾವಿರ ಬಾಡಿಗೆಯಂತೆ ನಿಗದಿ ಮಾಡಲಾಗಿತ್ತಂತೆ. ಅದರಂತೆ, ಶಾರಿಖ್ ಅವರ ಕುಟುಂಬದ ಅಕೌಂಟ್ ಗೆ ಹಾಕಲಾಗುತ್ತಿತ್ತಂತೆ.

ಇನ್ನು ಈ ಸಂಬಂಧ ಮುಂದಿನ ಜೂನ್ ತಿಂಗಳಲ್ಲಿ ಅಗ್ರಿಮೆಂಟ್ ಅಂತ್ಯವಾಗಲಿದೆಯಂತೆ. ಹೀಗಾಗಿಯೇ ಅಡ್ವಾನ್ಸ್ ವಾಪಾಸ್ ಮಾಡುವುದಕ್ಕೆ ಸೂಚನೆ ಕೂಡ ನೀಡಿದ್ದಾರಂತೆ. ಅಡ್ವಾನ್ಸ್ ವಾಪಾಸ್ ನೀಡಿದರೆ ಆಫೀಸ್ ಖಾಲಿ ಮಾಡುವುದಾಗಿ ಕಿಮ್ಮನೆ ರತ್ನಾಕರ್ ಹೇಳಿದ್ದಾರಂತೆ. ಈ ಬಗ್ಗೆ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇನ್ನು ಶಾರೀಖ್ ನ ಹಣ ಮತ್ತು ಆಸ್ತಿ ಮೂಲವನ್ನು ತಿಳಿದುಕೊಳ್ಳಲು ಅಧಿಕಾರಿಗಳು ಶಿವಮೊಗ್ಗದ ತೀರ್ಥಹಳ್ಳಿಗೂ ಭೇಟಿ ನೀಡಲಿದ್ದಾರಂತೆ. ಇನ್ನು ಶಿವಮೊಗ್ಗದ ಸೊಪ್ಪುಗುಡ್ಡೆಯ ಮನೆಗೂ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರಂತೆ.

Share This Article
Leave a Comment

Leave a Reply

Your email address will not be published. Required fields are marked *