ಶಿವಮೊಗ್ಗ: ಆಸೆ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನ ಜಾರಿಗೆ ತಂದಿದೆ. ಈ ಬೆನ್ನಲ್ಲೆ ಜಿಲ್ಲೆಯಲ್ಲಿ ಮತಾಂತರಗೊಂಡಿದ್ದ ಒಂದು ಕುಟುಂಬದವನ್ನ ಹಿಂದೂ ಧರ್ಮಕ್ಕೆ ವಾಪಾಸ್ ಕರೆಸಿದ್ದಾರೆ.
ಅಂತರಗಂಗೆಯ ಗ್ರಾಮದಲ್ಲಿ ಒಂದೇ ಕುಟುಂಬದ 9 ಜನ ಕ್ರಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಸ್ವಯಂ ನಿರ್ಧಾರದಿಂದ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಜಯಶೀಲನ್ ಕುಟುಂಬ ಸಮೇತರಾಗಿ ಮತಾಂತರಗೊಂಡಿದ್ದರು. ಇದೀಗ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದವರು ವಾಪಸ್ ಹಿಂದೂ ಧರ್ಮಕ್ಕೆ ವಾಪಾಸ್ ಕರೆಸಿಕೊಂಡಿದ್ದಾರೆ.
ಜನ್ನಾಪುರದಲ್ಲಿರುವ ರಾಮಮಂದಿರದಲ್ಲಿ ಹಿಂದೂಪರ ಸಂಘಟನೆಗಳು ಸೇರಿ, ಪೂಜೆ ಪುನಸ್ಕಾರಗಳನ್ನ ಮಾಡಿ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಕರೆಸಿಕೊಂಡಿದ್ದಾರೆ. ಎಲ್ಲರೂ ಆ ಕುಟುಂಬಸ್ಥರನ್ನ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.