ದಾವಣಗೆರೆ: ರಾಜ್ಯದಲ್ಲಿ ಸದ್ಯ ಜಾತಿ ಗಣತಿ ಬರದಿಂದ ಸಾಗ್ತಾ ಇದೆ. ಶಿಕ್ಷಕರ ಗೋಳಾಟದ ನಡುವೆಯೂ ಗಣತಿ ಸಮೀಕ್ಷೆ ಮಾತ್ರ ನಡೆಯುತ್ತಲೆ ಇದೆ. ಆದರೆ ಇದರ ನಡುವೆ ದಾವಣಗೆರೆಯಲ್ಲಿ ಶಾಕಿಂಗ್ ಘಟನೆಯೊಂದು ಎದುರಾಗಿದೆ. ಹಿಂದೂ ಸಮುದಾಯದವರ ಆಧಾರ್ ಕಾರ್ಡ್ ನಂಬರ್ ನಲ್ಲಿ ಮುಸ್ಲಿಂರ ಹೆಸರು ರಿಜಿಸ್ಟರ್ ಆಗಿದೆ. ಇದನ್ನು ಕಂಡು ಮನೆಯವರೇ ಶಾಕ್ ಆಗಿದ್ದಾರೆ.
ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ಡಾ.ಹರ್ಷ ಅವರ ಆಧಾರ್ ಕಾರ್ಡ್ ನಂಬರ್ ಹಾಕಿದ್ರೆ ಮುಸ್ಲಿಂರ ಹೆಸರು ತೋರಿಸ್ತಾ ಇದೆಮ ಅದುವೆ ಅಪ್ರೋಜ್, ಶರೀಫ್ ಬಾನು ಎಂಬುವವರ ಹೆಸರನ್ನ ತೋರಿಸ್ತಾ ಇದೆ. ಇದನ್ನು ಕಂಡು ಹರ್ಷ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಅವರು ಮಾತ್ರವಲ್ಲ ಗಣತಿಗೆ ಬಂದಿದ್ದ ಶಿಕ್ಷಕರು ಕೂಡ ಗೊಂದಲಗೊಂಡಿದ್ದಾರೆ.
ಬಳಿಕ ಮನೆ ಸದಸ್ಯರ ಒಂದೊಂದು ಹೆಸರನ್ನು ನಮೂದಿಸಿ, ಪರೀಕ್ಷೆ ಮಾಡಲಾಗಿದೆ. ಈ ವಿಚಾರವನ್ನ ಡಾ.ಹರ್ಷ ಅವರು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಮುಸ್ಲಿಮರ ಹೆಸರುಗಳನ್ನು ಡಿಲೀಟ್ ಮಾಡಿಸೋದಾಗಿ ಡಿಸಿ ಭರವಸೆಯನ್ನ ನೀಡಿದ್ದಾರೆ. ಆದ್ರೆ ಆಧಾರ್ ಕಾರ್ಡ್ ನಲ್ಲಿ ಈ ರೀತಿಯಾದಂತ ದೊಡ್ಡ ಮಿಸ್ಟೇಕ್ ಆಗುವುದಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆ ಕಾಡುತ್ತಿದೆ. ಡಾ.ಹರ್ಷ ಫ್ಯಾಮಿಲಿ ಮಾತ್ರವಾ ಅಥವಾ ಇದೆ ರೀತಿಯ ಮಿಸ್ಟೇಕ್ ಇನ್ಯಾರಿಗಾದ್ರೂ ಆಗಿದ್ಯಾ ಎಂಬ ಪ್ರಶ್ನೆಯೂ ಸಹಜವಾಗಿ ಕಾಡುತ್ತಿದೆ. ಆಧಾರ್ ಕಾರ್ಡ್ ಒಂದು ಇದ್ರೆ ಸಾಕು, ಎಲ್ಲವೂ ಅದರೊಳಗೆ ಸಿಗುತ್ತದೆ ಎಂದೇ ಎಲ್ಲರೂ ನಂಬಿಕೆಯಿಂದ ಇರುತ್ತಾರೆ. ಈಗ ನೋಡಿದ್ರೆ ಆಧಾರ್ ಕಾರ್ಡ್ ನಲ್ಲಿ ಹೆಸರೇ ಬೇರೆ ಆಗಿದೆ.
