ಬಾಲ್ಯ ವಿವಾಹ ಸಾಮಾಜಿಕ ಪಿಡುಗು ನಿಲ್ಲಿಸಲು ಸಹಕರಿಸಿ : ಶಿಕ್ಷಣ ಮೊದಲು, ನಂತರ ಮದುವೆ : ಟಿಹೆಚ್‌ಇಒ ಮಂಜುನಾಥ್

1 Min Read

 

 

ಚಿತ್ರದುರ್ಗ. ಸೆ.23: ಸಾಮಾಜಿಕ ಪಿಡುಗು ಬಾಲ್ಯ ವಿವಾಹ ನಿಲ್ಲಿಸಲು ಸಹಕರಿಸಿ. ಶಿಕ್ಷಣ ಮೊದಲು ನಂತರ ಮದುವೆ ಮಾಡುವಂತೆ ಸಮುದಾಯ ಜಾಗೃತಗೊಳಿಸಿ ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಗ್ರಾಮ ಆರೋಗ್ಯ ಯೋಜನೆ ಚುನಾಯಿತ ಪ್ರತನಿಧಿಗಳಿಗೆ ಸಮನ್ವಯ ಇಲಾಖೆಗಳ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಪಂಚಾಯತಿ ಕ್ಷಿಪ್ರ ನಿಗಾವಣಾ ತಂಡಗಳ ರಚನೆ ಸಾರ್ವಜನಿಕ ಆರೋಗ್ಯ ಸೇವೆ ಒದಗಿಸಲು ಒಗ್ಗೂಡಿಸಬೇಕಾಗಿದೆ. ತರಬೇತಿಯನ್ನು ನೀಡಿ ಕಾರ್ಯಕ್ಷಮತೆಯನ್ನು ಬಲಪಡಿಸಲು ಈ ತರಬೇತಿ ಅವಶ್ಯವಾಗಿದೆ. ತರಬೇತಿ ನಂತರ ಗ್ರಾಮ ಪಂಚಾಯತಿ ಟಾಸ್ಕ್ ಫೋರ್ಸ್ ಸಮಿತಿ ಬಲಗೊಂಡು ಸದಸ್ಯರು ತಮ್ಮ ತಮ್ಮ ವಾರ್ಡ್ಗಳಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆ ಬಗೆಹರಿಸಲು ಸಕ್ರಿಯವಾಗಬೇಕು ಎಂದು ಹೇಳಿದರು.
ಐ.ಸಿ.ಡಿ.ಎಸ್ ಮೇಲ್ವಿಚಾರಕಿ ವಾಸವಿ ಮಾತನಾಡಿ ಬಾಲ್ಯವಿವಾಹ ತಡೆ ಕಾಯ್ದೆ ಬಾಲ್ಯ ವಿವಾಹದಿಂದ ಉಂಟಾಗುವ ತಾಯಿ ಮರಣ ಶಿಶು ಮರಣದ ಬಗ್ಗೆ ಮಾಹಿತಿ ನೀಡಿದರು.

ಐ.ಸಿ.ಡಿ.ಎಸ್. ಮೇಲ್ವಿಚಾರಕಿ ರೂಪ ಮಾತನಾಡಿ, ಮಕ್ಕಳ ಹಕ್ಕು, ಸಹಾಯ ವಾಣಿ ಅಪೌಷ್ಟಿಕತೆ ಬಗ್ಗೆ ತಿಳಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳು, ಕೀಟಜನ್ಯ ರೋಗಗಳ ನಿಯಂತ್ರಣ ನಿರ್ವಾಹಣಾ ಕ್ರಮದ ಬಗ್ಗೆ ತರಬೇತಿ ನೀಡಿದರು.

ತರಬೇತಿ ಕಾರ್ಯಾಗಾರದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಮ್ಮ ಹುಣಸೆಕಟ್ಟೆ, ನಾರಾಯಣಸ್ವಾಮಿ, ಮಂಜಣ್ಣ, ಪವಿತ್ರಾ ಮಹಾಸ್ವಾಮಿ, ಪಂಚಾಯತಿ ಕಾರ್ಯದರ್ಶಿ ಪ್ರಶಾಂತ ಸಮುದಾಯ ಆರೋಗ್ಯಾಧಿಕಾರಿ ಭಾರತಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ನವೀನಲಕ್ಷಿö್ಮÃ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ನಾಗೇಶ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *