ಬೆಂಗಳೂರು: ಬೀದರ್ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ವಿಪಕ್ಷ ನಾಯಕರು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲೇಬೇಕೆಂದು ಆಗ್ರಹಿಸುತ್ತಿರುವಾಗ, ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಕೊಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರೇ ಹೇಳಿದ್ದಾರೆ. ಇದರ ನಡುವೆ ಇದೀಗ ಸಚಿನ್ ಪಂಚಾಳ್ ಬರೆದ ಡೆತ್ ನೋಟ್ ಸಿಕ್ಕಿದೆ.
ಹೌದು ಸಚಿನ್ ರೈಲಿಗೆ ತಲೆ ಕೊಡುವುದಕ್ಕೂ ಮುನ್ನ ಡೆತ್ ನೋಟ್ ಒಂದನ್ನ ಬರೆದಿಟ್ಟಿದ್ದರು. ಅದರಲ್ಲಿ ಪ್ರಿಯಾಂಕ್ ಖರ್ಗೆ ಹೆಸರನ್ನು ಉಲ್ಲೇಖಿಸಿದ್ದಾರೆ. ಡೆತ್ ನೋಟ್ ನಲ್ಲಿ ಬರೆದಂತೆ ಟೆಂಡ್ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಕೂಡ ಉಲ್ಲೇಖವಾಗಿದೆ. ಅದರಲ್ಲೂ ರಾಜ ಕಪನೂರು ಮತ್ತು ಗ್ಯಾಂಗ್ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಈ ರಾಜ ಕಪನೂರು ಗುತ್ತಿಗೆದಾರನಿಗೆ ಹಣಕ್ಕೆ ಬೇಡಿಕೆ ಹಾಕಿದ್ದ ವ್ಯಕ್ತಿ.
ಡೆತ್ ನೋಟ್ ನಲ್ಲಿ ಏನಿದೆ..?
‘ತಮ್ಮ ಸಾವಿಗೆ ರಾಜು ಕಪನೂರು ಹಾಗೂ ಗ್ಯಾಂಗ್ ಕಾರಣ. ತಾವೂ ಸುಮಾರು ಎರಡು ವರ್ಷಗಳಿಂದ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಕಂಪನಿಯ ಎಂಡಿ ಮೂಲಕ ರಾಜು ಕಪನೂರು ಪರಿಚಯವಾಗಿತ್ತು. ಸುಮಾರು 12 ಕೋಟಿ ರೂಪಾಯಿಯ ಟೆಂಡರ್ ಕರೆಯಲಾಗುತ್ತಿದ್ದು, ಅದನ್ನು ನಿಮಗೆ ಮಾಡಿಸಿಕೊಡುತ್ತೇನೆಂದು ರಾಜು ಕಪನೂರು ಭರವಸೆ ನೀಡಿದ್ದ. ಈ ಟೆಂಡರ್ ಬೇಕೆಂದರೆ ಶೇ.5 ರಷ್ಟು ಕಮಿಷನ್ ಕೊಡಬೇಕು. ಸಚುವ ಪ್ರಿಯಾಂಕ್ ಖರ್ಗೆ ಹೇಳಿದ ಮಾತನ್ನು ದಾಟುವುದಿಲ್ಲ ಎಂದು ಹೇಳಿದ್ದ. ಸುಮಾರು ಐದಾರು ಬಾರಿ ನಾವೀಬ್ಬರೂ ಜೊತೆಯಾಗಿ ಮಾನ್ಯ ಸಚಿವರನ್ನು ಭೇಟಿಯಾಗಿ ಬಂದಿರುತ್ತೇವೆ. ಆದರೂ ಸಚಿವರು ಫೋನ್ ಮೂಲಕ ಸಿಇ ಇಜಾಜ್ ಹುಸೇನ್ ಅವರಿಗೆ ಮಾಡಿಕೊಡು ಎಂದು ಹೇಳಿರುತ್ತಾರೆ. ಆದರೂ ಈ ಟೆಂಡರ್ ಗೆ 5% ಕಮಿಷನ್ ಎಂದರೆ 60 ಲಕ್ಷ. ರೂಪಾಯಿ ಆಗುತ್ತದೆ. ಇದಕ್ಕೆ ಕಪನೂರು ಬೇಡಿಕೆ ಇಟ್ಟಿದ್ದ ಹಣವನ್ನು ಮುಂಗಡವಾಗಿ ನೀಡಿದ್ದೆವು. ಬಳಿಕ ಆತ 15 ಕೋಟಿಯ ಬೇರೆ ಟೆಂಡರ್ ಮಾಡಿಕೊಡುತ್ತೇನೆಂದು ಭರವಸೆ ನೀಡಿದ್ದ’ ಎಂದು ಡೆತ್ ನೋಟಿನಲ್ಲಿ ಉಲ್ಲೇಖ ಮಾಡಿದ್ದಾರೆ.