ಬೆಂಗಳೂರು: ಗುಜರಾತ್ ನಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸುವುದಕ್ಕೆ ಕಾರಣ ಹೊಸ ಸ್ಟಾಟರ್ಜಿ. ಹಳೆ ಮುಖಗಳಿಗೆ ಕೊಕ್ ಕೊಟ್ಟು, ಹೊಸ ಮುಖಗಳಿಗೆ ಮಣೆ ಹಾಕಿದ್ದರು. ಹೀಗಾಗಿ ಗೆಲುವು ಸುಲಭವಾಗಿತ್ತು. ಹೀಗಾಗಿ ಕರ್ನಾಟಕದಲ್ಲೂ ಅದೇ ಸ್ಟಾಟರ್ಜಿ ಬಳಕೆಗೆ ನಿರ್ಧಾರ ಮಾಡಲಾಗಿದೆ. ಆದರೆ ಇದು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ರಾಜೀನಾಮೆಯ ಸರಣಿ ಶುರುವಾಗಿದೆ.
ಈಗಾಗಲೇ ಕೆ ಎಸ್ ಈಶ್ವರಪ್ಪ ಅವರು ಮೊದಲಿಗೆ ರಾಜೀನಾಮೆ ನೀಡಿದ್ದರು. ಜಗದೀಶ್ ಶೆಟ್ಟರ್ ಅಸಮಾಧಾನ ಹೊರ ಹಾಕಿದ್ದರು. ಲಕ್ಷ್ಮಣ ಸವದಿ ಕೂಡ ರಾಜೀನಾಮೆ ನೀಡಲು ಘೋಷಣೆ ಮಾಡಿದ್ದಾರೆ. ಈಗ ಎಸ್ ಅಂಗಾರ ಅವರ ಸರದಿ.
ಎಸ್ ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಮಾತನಾಡಿದ್ದು, ಪಕ್ಷ ನನ್ನನ್ನು ನಡೆಸಿಕೊಂಡ ರೀತಿ ನೋವು ತಂದಿದೆ. ಕಳೆದ 30 ವರ್ಷಗಳಲ್ಲಿ ಜನಪರ ನ್ಯಾಯಯುತವಾದ ರಾಜಕೀಯ ಮಾಡಿದ್ದೇನೆ. ನಾನು ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದೇನೆ..? ರಾಜಕೀಯ ಚಟುವಟಿಕೆಗಳಲ್ಲಿ ಮುಂದೆ ಭಾಗವಹಿಸುವುದಿಲ್ಲ ಎಂದಿದ್ದಾರೆ.