Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗ್ರಾಹಕರಿಗೂ ಹೊರೆ.. ರೈತರಿಗೂ ಬರೆ.. ಈರುಳ್ಳಿ ಫಸಲಿನ ಸ್ಥಿತಿಗತಿ ಏನಿದೆ..?

Facebook
Twitter
Telegram
WhatsApp

ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಬೆಳೆಗಳು ನೆಲಕಚ್ಚಿವೆ. ಇನ್ನೇನು ಕೈಗೆ ಸಿಗುತ್ತವೆ ಎಂಬ ಬೆಳೆಯೂ ಹಾಳಾಗುತ್ತಿದೆ. ಅದರಲ್ಲಿ ಈರುಳ್ಳಿ ಬೆಲೆಯೂ ಒಂದು. ಕಟಾವಿನ ಹಂತಕ್ಕೆ ಬಂದಿದ್ದ ಈರುಳ್ಳಿ ಬೆಳೆ ಕೊಳೆಯುವುದಕ್ಕೆ ಶುರುವಾಗಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಈರುಳ್ಳಿ ಕೊಂಡುಕೊಳ್ಳಲು ಹೋದವನಿಗೆ ಶಾಕ್ ನೀಡುತ್ತಿದೆ. ಹಾಗಂತ ರೈತರಿಗೂ ಲಾಭದಾಯಕವೆನಿಸುವ ಸ್ಥಿತಿ ಏನು ಇಲ್ಲ. ಬದಲಿಗೆ ಫಸಲು ಕೈಗೆ ಸಿಗದೆ ಕಂಗಲಾಗಿದ್ದಾರೆ.

ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವನ್ನು ಕಂಡಿದ್ದ ರೈತ, ಒಳ್ಳೆ ಲಾಭ ಮಾಡಬಹುದು ಎಂದುಕೊಂಡಿದ್ದ ಆದರೆ ಬೆಳೆಯೇ ಕೊಳೆಯುತ್ತಿದ್ದು, ಏನು ಮಾಡಲಾಗದ ಸ್ಥಿತಿಯಲ್ಲಿದ್ದಾನೆ. ಬೆಂಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಇಂಥ ಪರಿಸ್ಥಿತಿ ಬಂದೊದಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕೆಲವೆಡೆ ಈರುಳ್ಳಿಯನ್ನು ಬೆಳೆಯಲಾಗಿದೆ. ಜಿಲ್ಲೆಯಲ್ಲಿ 11 ಸಾವಿರ ಹೆಕ್ಟೇರ್ ನಷ್ಟು ಈರುಳ್ಳಿಯನ್ನು ಹಾಕಲಾಗಿದೆ. ಆದರೆ ಮಳೆಯ ಪರಿಣಾಮ ನೂರು ಹೆಕ್ಟೇರ್ ನಷ್ಟು ಬೆಳೆ ಕೈಯಿಂದ ಜಾರಿದೆ.

ಹೀಗೆ ಬೆಳೆ ನಾಶವಾದ ಪರಿಣಾಮ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ. ಪ್ರತಿ ಕೆಜಿಗೆ ಈ ಮೊದಲು 40 ರೂಪಾತಿಗೆ ಮಾರಾಟವಾಗುತ್ತಿತ್ತು. ಈಗ ನೋಡಿದ್ರೆ 5 ಕೆಜಿ ಈರುಳ್ಳಿ ಬೆಲೆ ಬೆಂಗಳೂರಿನಲ್ಲಿ 400 ರೂಪಾಯಿ ಇದೆ. ಇದನ್ನು ಕಂಡು ಕೆಜಿ ತಗೋಬೇಕಾ, ಐದು ಕೆಜಿ ತಗೋಬೇಕಾ ಎಂಬ ಗೊಂದಲ ಗ್ರಾಹಕರದ್ದಾಗಿದೆ. ಆದರೂ ಕೆಜಿ 70-80 ರೂಪಾಯಿ ಬೀಳಲಿದೆ. ಹೀಗೆ ನಿರಂತರವಾಗಿ ಮಳೆ ಸುರಿದರೆ ಈರುಳ್ಳಿ ಬೆಲೆಯಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವುದರಲ್ಲಿ ಅನುಮಾನವಿಲ್ಲ. ರೈತರ ಕೈಗೆ ಫಸಲು ಬಂದರೆ ಲಾಭವಾದರೂ ಆಗುತ್ತೆ. ಇಂದಿನ ವಾತಾವರಣದಿಂದ ರೈತರಿಗೂ ಸುಖವಿಲ್ಲ, ಗ್ರಾಹಕರಿಗೂ ಲಾಭವಿಲ್ಲ ಎಂಬಂತಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಾನಾ ಚಂಡಮಾರುತ ಎಫೆಕ್ಟ್ : ಹವಮಾನ ಇಲಾಖೆ ನೀಡಿದ ಎಚ್ಚರಿಕೆ ಏನು..?

ಎಲ್ಲೆಡೆ ಬೆಂಬಿಡದೆ ಮಳೆರಾಯ ಸುರಿಯುತ್ತಿದ್ದಾನೆ. ಕಳೆದ ಕೆಲವು ದಿನಗಳಿಂದ ವಿಶ್ರಾಂತಿಯನ್ನೇ ನೀಡುತ್ತಿಲ್ಲ. ಇದರಿಂದ ಜನರು ಕೂಡ ರೋಸೆದ್ದು ಹೋಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಹಾಗೂ ಒಡಿಶಾದಲ್ಲಿ ಶುರಿವಾಗಿರುವ ಚಂಡಮಾರುತದ ಪ್ರಭಾವವಾಗಿದೆ. ಚಂಡಮಾರುತ ತಗ್ಗುವ ತನಕವೂ ಈ

ಗ್ರಾಹಕರಿಗೂ ಹೊರೆ.. ರೈತರಿಗೂ ಬರೆ.. ಈರುಳ್ಳಿ ಫಸಲಿನ ಸ್ಥಿತಿಗತಿ ಏನಿದೆ..?

ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಬೆಳೆಗಳು ನೆಲಕಚ್ಚಿವೆ. ಇನ್ನೇನು ಕೈಗೆ ಸಿಗುತ್ತವೆ ಎಂಬ ಬೆಳೆಯೂ ಹಾಳಾಗುತ್ತಿದೆ. ಅದರಲ್ಲಿ ಈರುಳ್ಳಿ ಬೆಲೆಯೂ ಒಂದು. ಕಟಾವಿನ ಹಂತಕ್ಕೆ ಬಂದಿದ್ದ ಈರುಳ್ಳಿ ಬೆಳೆ ಕೊಳೆಯುವುದಕ್ಕೆ ಶುರುವಾಗಿದೆ. ಇದರ

ಉಪಚುನಾವಣೆ ಹೊತ್ತಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ..!

ಬೆಂಗಳೂರು: ರಾಜ್ಯ ಸರ್ಕಾರ ಇದೀಗ ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇಂದು ರಾಜ್ಯ ಸರ್ಕಾರದಿಂದ ಈ ಆದೇಶ ಹೊರಬಿದ್ದಿದೆ. ಬೆಂಗಳೂರಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾದ ಮನೋಜ್ ಜೈನ್ ಅವರನ್ನು

error: Content is protected !!