ಸುಸಜ್ಜಿತ ಕನ್ನಡ ಭವನ ನಿರ್ಮಾಣ : ಶಾಸಕ ಟಿ.ರಘುಮೂರ್ತಿ ಭರವಸೆ

2 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್,  ಚಳ್ಳಕೆರೆ, ಜುಲೈ. 08  : ಸಾಹಿತ್ಯ- ಸಾಂಸ್ಕೃತಿಕ ಚಟವಟಿಕೆಗಳಿಗೆ ಅನುಕೂಲವಾಗುವಂತೆ ನಗರದ ಮಧ್ಯ ಭಾಗದಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.

ನಗರದ ಗಾಯಿತ್ರಿ ಕಲ್ಯಾಣಮಂಟಪದಲ್ಲಿ ಭಾನುವಾರ ಸಂಜೆ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪತಿಷತ್ ಹಮ್ಮಿಕೊಂಡಿದ್ದ ಸಾಹಿತಿ ದಿವಂಗತ ಕಮಲಾ ಹಂಪನಾ ಸ್ಮರಣಾರ್ಥ ಕವಿಗೋಷ್ಠಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಷೆ, ಸಂಸ್ಕೃತಿ ಹಾಗೂ ಜನಪದ ಕಲೆಗಳ ಜತೆಗೆ ಸಾಹಿತಿ ದಿವಂಗತ ಕಮಲ ಹಂಪನಾ ಅವರ ಬದುಕು-ಬರಹವನ್ನು ಯುವಜನರಿಗೆ ಅರ್ಥೈಸಿಕೊಡಬೇಕು. ಮತ್ತು ಶಿಕ್ಷಣದ ಜತೆಗೆ ಕನ್ನಡ ಸಾಹಿತ್ಯ ಓದುವ ಅಭಿರುಚಿ ತಪ್ಪದೆ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬಂಡಾಯ ಸಾಹಿತಿ ಸಿ.ಶಿವಲಿಂಗಪ್ಪ, ಸಮಾಜದ ಆಗು ಹೋಗುಗಳಿಗೆ ಮಿಡಿಯುವುದಲ್ಲದೆ ತನ್ನ ಬದುಕಿನ ಬದ್ಧತೆಯನ್ನು ಕಾವ್ಯ ರೂಪದಲ್ಲಿ ಕಟ್ಟಿಕೊಡಬೇಕು ಎಂದು ಯುವಕವಿಗಳಿಗೆ ಕಿವಿ ಮಾತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಕನ್ನಡ ಭವನ ನಿರ್ಮಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ವಿ.ಶ್ರೀರಾಮರೆಡ್ಡಿ, ಪ್ರಾಧ್ಯಾಪಕ ಪ್ರೊ.ಜಿ.ವಿ.ರಾಜಣ್ಣ, ಸಹ ಶಿಕ್ಷಕರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ಈರಣ್ಣ, ಕಸಾಪ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಹ್ಯಾದ್ರಿ ಮಂಜುನಾಥ್, ಕೆ.ಚಿತ್ತಯ್ಯ ಮಾತನಾಡಿದರು.

ಕವಿಗೋಷ್ಠಿಯಲ್ಲಿ ಆಯ್ಕೆಯಾದ ರಂಗಸ್ವಾಮಿ ರಚಿಸಿದ ಕವನಕ್ಕೆ ಪ್ರಥಮ, ಎನ್.ಅಭಿಷೇಕ ದ್ವಿತೀಯ ಹಾಗೂ ರವಿಕುಮಾರ್ ರವರ ಕಾವ್ಯಕ್ಕೆ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು.ಒಟ್ಟು 20 ಜನ ಕವಿಗಳು ಕವಿತೆ ವಾಚನ ಮಾಡಿದರು.

ಕಸಾಪ ಕಸಬಾ ಹೋಬಳಿ ಕಸಾಪ ಘಟಕದ ಅಧ್ಯಕ್ಷ ದಯಾನಂದ್, ಪ್ರಧಾನ ಕರ‍್ಯದರ್ಶಿ ಸಿದ್ದಾಪುರ ಮಲ್ಲೇಶ್, ಪ್ರೌಢಶಾಲೆ ಕನ್ನಡ ಭಾಷಾ ಬೋಧಕರ ವೇದಿಕೆ ತಾಲ್ಲೂಕು ಅಧ್ಯಕ್ಷ ಮಹಾಂತೇಶ್, ಶಿಕ್ಷಕರ ಸಂಘದ ದೊಡ್ಡಯ್ಯ, ರವಿಕುಮಾರ್, ದೈಹಿಕ ಶಿಕ್ಷಕ ಮರವಾಯಿ ಶ್ರೀನಿವಾಸ್ ಇದ್ದರು.

ಚಳ್ಳಕೆರೆ ನಗರದ ಗಾಯಿತ್ರಿ ಕಲ್ಯಾಣಮಂಟಪದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ಪ್ರತಿಭಾ ಪುರಸ್ಕಾರ ಕರ‍್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಶಾಸಕ ಟಿ.ರಘುಮೂರ್ತಿ ಅಭಿನಂದಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಹ್ಯಾದ್ರಿ ಮಂಜುನಾಥ್, ಡಿ.ಈರಣ್ಣ

Share This Article
Leave a Comment

Leave a Reply

Your email address will not be published. Required fields are marked *