ಗುಬ್ಬಿ: ತಾಲೂಕಿನ ನಿಟ್ಟೂರು ರೈಲ್ವೆ ಗೇಟ್ ಬ್ರಿಡ್ಜ್ ಮಾಡುವುದಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದ್ದು ಸ್ಥಳಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಭೇಟಿ ನೀಡಿ ಪರಿಶೀಲನೆ ಮಾಡಿದರು.
ರೈಲ್ವೆ ಬ್ರಿಡ್ಜ್ ಹಾಗೂ ಸ್ಥಳೀಯರು ಒಂದಷ್ಟು ಜಾಗವನ್ನು ಬಿಟ್ಟುಕೊಟ್ಟರೆ ಪಕ್ಕದಲ್ಲಿಯೇ ಸರ್ವಿಸ್ ರಸ್ತೆಯನ್ನು ಸಹ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತೇವೆ.ಯಾವುದೇ ಕಾರಣಕ್ಕೂ ಕಲ್ಲೇಶ್ವರ ಸ್ವಾಮಿ ದೇವಸ್ಥಾನ ತೆರವಾಗುವುದಿಲ್ಲ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡಿ ನಿಟ್ಟೂರು ಕಡಬ ಮೈಸೂರಿಗೆ ತೆರಳುವಂತಹ ಭಾಗದಲ್ಲಿ ನಿಟ್ಟೂರು ರೈಲ್ವೆ ನಿಲ್ದಾಣ ಪಕ್ಕದಲ್ಲಿ ರೈಲ್ವೆ ಗೇಟ್ ಇದ್ದು ಸಾಕಷ್ಟು ರೀತಿಯ ಸಮಸ್ಯೆ ಈ ಭಾಗದಲ್ಲಿ ನಿರ್ಮಾಣವಾಗುತ್ತಿತ್ತು ಈಗ ರೈಲ್ವೆ ಬ್ರಿಡ್ಜ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಬ್ಯಾಟರಂಗೆ ಗೌಡ, ಮುಖಂಡರಾದ ಎಸ್ ಡಿ ದಿಲೀಪ್ ಕುಮಾರ್, ಎನ್ ಸಿ ಪ್ರಕಾಶ್, ಜಿ ಎನ್ ಬೆಟ್ಟ ಸ್ವಾಮಿ ಬಿಜೆಪಿ ಅಧ್ಯಕ್ಷ ಪಂಚಾಕ್ಷರಿ, ಡಿಸಿ ಸಿ ಬ್ಯಾಂಕ್ ನಿರ್ದೇಶಕ ಪ್ರಭಾಕರ್ ಸೇರಿದಂತೆ ಜೆಡಿಎಸ್ ಬಿಜೆಪಿ ಹಲವು ಮುಖಂಡರುಗಳು ಭಾಗಿಯಾಗಿದ್ದರು.