ಹಾಸನ: ಕಳೆದ 2007-08ರಲ್ಲಿ ಐಐಟಿ ಸ್ಥಾಪನೆಗಾಗಿ ರೈತರ ಜಮೀನುಗಳನ್ನು ಸರ್ಕಾರ ವಶಪಡಿಸಿಕೊಳ್ಳಲಾಗಿತ್ತು. ಆದರೆ ಈಗ ಆ ಜಾಗದಲ್ಲಿ ಐಐಟಿ ಬಿಟ್ಟು, ಕೈಗಾರಿಕೆ ಸ್ಥಾಪನೆ ಮಾಡಿವುದಕ್ಕೆ ಯೋಚಿಸಲಾಗಿದೆ. ಇದು ಹಾಸನದಲ್ಲಿ ಪ್ರೀತಂ ಹೌಡ ಹಾಗೂ ರೇವಣ್ಣರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಕೆಂಡಾಮಂಡಲರಾಗಿದ್ದಾರೆ. ಎಂಟು ಗ್ರಾಮಗಳಿಂದ ಸುಮಾರು ಒಂದು ಸಾವಿರ 57 ಎಕರೆಯನ್ನು ಸರ್ಕಾರ ವಶಪಡಿಸಿಕೊಳ್ಳಲಾಗಿತ್ತು. ಆದ್ರೆ ಇಷ್ಟು ವರ್ಷವಾದ ಬಳಿಕ ಸರ್ಕಾರ ಐಐಟಿ ಸ್ಥಾಪನೆ ಬದಲು ಕೈಗಾರಿಕಾ ಸ್ಥಾಪನೆಗೆ ಸರ್ಕಾರ ನಿರ್ಧಾರ ಮಾಡಿರುವುದು ದೇವೇಗೌಡ ಅವರ ಕುಟುಂಬದವರ ಬೇಸರಕ್ಕೆ ಕಾರಣವಾಗಿದೆ. ಹಾಸನದಲ್ಲಿ ಐಐಟಿ ಮಾಡುವುದು ದೇವೇಗೌಡ ಅವರ ಕನಸಾಗಿತ್ತು. ಈಗ ಸರ್ಕಾರ ಈ ರೀತಿ ನಿರ್ಧಾರ ತೆಗೆದುಕೊಂಡಿರುವುದಕ್ಕೆ ರೇವಣ್ಣ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ದಶಕದ ಹಿಂದೆಯೇ ಐಐಟಿಗೆ ಎಂದು ಮೀಸಲಿಟ್ಟ ಜಾಗವನ್ನು ಕೈಗಾರಿಕೆಗೆ ಬಳಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ರಾಜ್ಯ ಸರ್ಕಾರ ಅದಕ್ಕೆ ವಿರುದ್ಧವಾಗಿ ನಡೆದರೆ, ಬೆಂಗಳೂರಿನ ಗಾಂಧಿ ಪ್ರತಿಮೆ ಮುಂದೆ, ಹೆಚ್ ಡಿ ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಪ್ರೀತಂ ಗೌಡ ಕೂಡ ಪ್ರತಿಕ್ರಿಯೆ ನೀಡಿದ್ದು, ಐಐಟಿ ಸ್ಥಾಪನೆಯಿಂದ ಜಿಲ್ಲೆಯವರಿಗೆ ಸೀಟ್ ಆಗಲಿ, ಉದ್ಯೋಗವಾಗಲಿ ಸಿಗುವುದಿಲ್ಲ. ಕೇವಲ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಸಿಗುತ್ತೆ ಅಷ್ಟೇ ಎಂದಿದ್ದಾರೆ.