Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾಲಕಿಯರ ಪದವಿ ಪೂರ್ವ ಕಾಲೇಜು ಕಾಂಪೌಡ್ ಹಾಗೂ ಶೌಚಾಲಯ ನಿರ್ಮಾಣ : ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಭರವಸೆ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, ಆ.19: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಅಗತ್ಯ ಇರುವ  ಮೂಲಭೂತ ಸೌಕರ್ಯ ಒದಗಿಸಲಾಗುವುದು. ಆದ್ಯತೆ ಮೇರೆಗೆ  ಕಾಲೇಜಿನ ಸುತ್ತ ಕಾಂಪೌಂಡ್ ಹಾಗೂ ಶೌಚಾಲಯ ನಿರ್ಮಿಸಲಾಗುವುದೆಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ನೀಡಿದರು.

ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2023-24ನೇ ಸಾಲಿನ ಸಾಂಸ್ಕøತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಇಕೋ ಕ್ಲಬ್‍ಗಳ ಉದ್ಘಾಟನೆ ನೆರವೇರಿಸಿದ ಅವರು, ನಂತರ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಯಶಸ್ಸನ್ನು ಮುಟ್ಟಲು ಗಮನವಿಟ್ಟು ಓದಬೇಕು. ಸ್ಪಷ್ಟವಾದ ಗುರಿಯನ್ನು ಹೊಂದಿ ಜ್ಞಾನರ್ಜನೆ ಮಾಡಬೇಕು. ಮನಸ್ಸುಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

ಮಕ್ಕಳ ಭವಿಷ್ಯದ ಬಗ್ಗೆ ತಂದೆ-ತಾಯಿಗಳು ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ.  ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆ ಕನಸನ್ನು ನನಸು ಮಾಡುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ನೀವು ಎಷ್ಟೇ ಎತ್ತರಕ್ಕೆ ಬೆಳೆದರು ನಿಮ್ಮ ತಂದೆ-ತಾಯಿಗಳನ್ನು ಹಾಗೂ ಸ್ನೇಹಿತರನ್ನ ಮರೆಯಬಾರದು. ಹೆತ್ತವರು ಋಣವನ್ನು ತೀರಿಸಬೇಕು ಎಂದರು.

ಪರಿಸರ ಸ್ವಚ್ಛತೆ ಬಗ್ಗೆ ಗಮನಹರಿಸಿ:
ಕವಾಡಿಗರ ಹಟ್ಟಿ ಪ್ರಕರಣವು ಮತ್ತೆ ಮರುಕಳಿಸಬಾರದು. ಮನೆಯ ಸುತ್ತಲಿಲನ ಪರಿಸರ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು. ಗ್ರಾಮೀಣ ಭಾಗದಿಂದ ಬಂದ ವಿದ್ಯಾರ್ಥಿಗಳು ಈ ಕುರಿತು ಊರಿನಲ್ಲಿ ಜಾಗೃತಿ ಮೂಡಿಸಬೇಕು. ಸ್ವಯಂ ಸೇವಕರಾಗಿ ತಮ್ಮ ಏರಿಯಾ ಹಾಗೂ ಗ್ರಾಮಗಳಲ್ಲಿ ಸ್ವಚ್ಚತೆ ಕಾರ್ಯಕೈಗೊಳ್ಳಿ. ಮನೆಯಲ್ಲಿ ಕುದಿಸಿ ಹಾರಿಸಿದ ನೀರನ್ನು ಕುಡಿಯುವಂತೆ ತಿಳಿಹೇಳಿ. ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ರೋಗ ರುಜಿಗಳು ಬಾಧಿಸುವುದಿಲ್ಲ ಎಂದು ಶಾಸಕ ವಿರೇಂದ್ರ ಪಪ್ಪಿ ವಿದ್ಯಾರ್ಥಿಗಳಿಗೆ ಕವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ ಅವರು 2022-23 ನೇ ಶೈಕ್ಷಣಿಕ ವರ್ಷದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ವಿತರಿಸಿದರು.

ಕಲಾವಿಭಾಗದಲ್ಲಿ ಎಚ್.ಭವ್ಯ, ಎಸ್.ಮಹಾಲಕ್ಷ್ಮೀ, ಜಿ.ಡಿ.ರಕ್ಷಿತ, ಆರ್.ಕುಮುದ, ಕೀತೀಬಾಯಿ, ಪಿ.ಎಚ್.ರಕ್ಷತಾ, ಆರ್.ಎಸ್.ಕೀರ್ತಿ, ಕೆ.ಕವನ, ವಿಜ್ಞಾನ ವಿಭಾಗದಲ್ಲಿ ಪ್ರವಲಿಕ, ಯು.ಚಿನ್ಮಯಿ, ಸಿ.ಎಂ.ಅಮೃತ, ಎಸ್.ಶ್ರೀವತ್ಸಲಾ, ಟಿ.ಸಿ.ತೇಜಶ್ರೀ, ಪಿ.ಡಿ.ಅರ್ಚನ, ಲಾವಣ್ಯ, ರಚನಾ, ಸಾನಿಯಾ, ವಾಣಿಜ್ಯ ವಿಭಾಗದಲ್ಲಿ ಶಿವಶ್ರೀ, ಕೆ.ಎಸ್.ಚಿತ್ರ, ಎಸ್.ವೈ.ಪೂಜಾಶ್ರೀ, ಆರ್. ಗೀತಾಂಜಲಿ, ಜ್ಯೋತಿ ಚಿದಾನಂದ, ಆರ್. ಕೀರ್ತನ, ಎಲ್. ಯಶಸ್ವಿನಿ, ಎಚ್.ಸುಪ್ರಿತಾ, ಆರ್.ಸ್ಫೂರ್ತಿ, ಪಿ.ಮೇಘನ, ಟಿ.ಸಂಗೀತಾ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಹೆಚ್. ನಾಗರಾಜ್. ಉಪ ಪ್ರಾಂಶುಪಾಲ ಎಂ. ಕರಿಯಪ್ಪ, ಹಿರಿಯ ಉಪನ್ಯಾಸಕ ಡಾ. ಶಬ್ಬೀರ್ ಅಹಮದ್ ಖಾನ್, ಇತಿಹಾಸ ಉಪನ್ಯಾಸಕ ಶ್ರೀನಿವಾಸ್, ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Digital Ration Card : ಡಿಜಿಟಲ್ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ ? ಇಲ್ಲಿದೆ ಉಪಯುಕ್ತ ಮಾಹಿತಿ…!

ಸುದ್ದಿಒನ್ | ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕೇಂದ್ರವು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವಜನಿಕರಿಗೆ ನೇರವಾಗಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಲ್ಲಾ ರೀತಿಯ ಡೇಟಾ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲು ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. ಈ ವಿಭಾಗದಲ್ಲಿ

ಈ ರಾಶಿಯ ಪತಿ-ಪತ್ನಿ ಸಣ್ಣ ವಿಚಾರಕ್ಕೆ ಮನೆ ಬಿಟ್ಟು ಹೋಗುವರು

ಈ ರಾಶಿಯ ಪತಿ-ಪತ್ನಿ ಸಣ್ಣ ವಿಚಾರಕ್ಕೆ ಮನೆ ಬಿಟ್ಟು ಹೋಗುವರು: ಈ ರಾಶಿಯವರು ಮದುವೆ ವಿಚಾರಕ್ಕೆ ತುಂಬಾ ಮಂಡತನ ಮಾಡುವರು: ಭಾನುವಾರ ರಾಶಿಭವಿಷ್ಯ -ಡಿಸೆಂಬರ್-8,2024 ಸೂರ್ಯೋದಯ: 06:38, ಸೂರ್ಯಾಸ್ತ : 05:37 ಶಾಲಿವಾಹನ ಶಕೆ

ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ..!

ಬಳ್ಳಾರಿ: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಬೆಚ್ಚಿ ಬೀಳುವಂತೆ ಮಾಡಿದೆ. ಬ್ಯಾಕ್ ಟು ಬ್ಯಾಕ್ ಸಿಜೇರಿಯನ್ ಆದವರೇ ಸಾವನ್ನಪ್ಪುತ್ತಿದ್ದಾರೆ. ಈ ಸಾವು ಖಂಡಿಸಿ ಇಂದು ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಶ್ರೀರಾಮುಲು ನೇತೃತ್ವದಲ್ಲಿ ಪ್ರತಿಭಟನೆ

error: Content is protected !!