ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಫೆ.02): ಮುನ್ಸಿಪಲ್ ಕಾಲೋನಿಯಲ್ಲಿರುವ ಪ್ರಸನ್ನ ಮಹಾಗಣಪತಿ ದೇವಸ್ಥಾನದಲ್ಲಿ ಕಂಠೇಶ್ವರಸ್ವಾಮಿ ಮತ್ತು ನಂದಿ ವಿಗ್ರಹ ಪ್ರತಿಷ್ಠಾಪನೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ನಂತರ ತೀರ್ತಪ್ರಸಾದ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಂಠೇಶ್ವರಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ದಾನಿಗಳಾದ ಬಿ.ವಿ.ರುದ್ರಪ್ಪ, ಶ್ರೀಮತಿ ಕೆ.ಸಿ.ರಾಜಮ್ಮ, ಮಕ್ಕಳಾದ ಶ್ರೀಮತಿ ಸಿ.ಕಲಾವತಿ, ಎ.ಆರ್.ತಿಪ್ಪೇಸ್ವಾಮಿ ಸಹೋದರರು ಹಾಗೂ ದೇವಸ್ಥಾನದ ಭಕ್ತಮಂಡಳಿಯವರು ಈ ಸಂದರ್ಭದಲ್ಲಿ ಹಾಜರಿದ್ದರು.