ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ನಾಯಕರು ಸಾಕಷ್ಟು ದಿನಗಳಿಂದ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಜನವರಿ 9ಕ್ಕೆ ಪಾದಯಾತ್ರೆಗೆ ದಿನ ಕೂಡ ನಿಗದಿಯಾಗಿತ್ತು. ಆದ್ರೆ ಇದೀಗ ಕಾಂಗ್ರೆಸ್ ನವರು ಮಾಡಿದ್ದ ಫ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಯಾಕಂದ್ರೆ ಕೊರೊನಾ ಹೆಚ್ಚಳದಿಂದಾಗಿ ರಾಜ್ಯದಲ್ಲಿ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ. ಈ ನಿಯಮಗಳ ಪ್ರಕಾರ ಪಾದಯಾತ್ರೆ, ಪ್ರತಿಭಟನೆ ಸೇರಿದಂತೆ ಜನ ಸೇರುವ ಯಾವುದೇ ಕಾರ್ಯಕ್ಕೂ ಅವಕಾಶ ನೀಡಿಲ್ಲ. ಆದ್ರೆ ಈ ನಡುವೆ ನಾವೂ ಪಾದಯಾತ್ರೆ ಮಾಡಿಯೆ ಮಾಡ್ತೀವಿ ಅಂತ ಕಾಂಗ್ರೆಸ್ ನಾಯಕರು ಹಠ ಹಿಡಿತು ಕುಳಿತಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸುಧಾಕರ್, ಕಾಂಗ್ರೆಸ್ ನವರಿಗೂ ಜನರ ಬಗ್ಗೆ ಕಾಳಜಿ ಇದೆ ಎಂದುಕೊಳ್ಳುತ್ತೇನೆ ಎಂದಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಅಧಿಕಾರ ನಡೆಸಿದವರೇ. ಪಾದಯಾತ್ರೆ ಮಾಡಬೇಕಾ..? ಬೇಡವಾ ಎಂದು ಅವರೇ ತೀರ್ಮಾನಿಸಲಿ ಎಂದಿದ್ದಾರೆ.
ಕಾಂಗ್ರೆಸ್ ನವರು ದೀರ್ಘಕಾಲ ಆಡಳಿತ ಮಾಡಿದವರೇ ಅಗಿದ್ದಾರೆ. ಅವರಲ್ಲೂ ಸಿಎಂ ಆದವರು, ಮಂತ್ರಿಯಾದವರು ಇದ್ದಾರೆ. ಜನರ ಹಿತ ದೃಷ್ಟಿಯಿಂದ ನಮ್ಮ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದೇವೆ. ಅದನ್ನ ಅವರು ಕೂಡ ಅರ್ಥ ಮಾಡಿಕೊಳ್ತಾರೆ ಅನ್ನೋ ನಂಬಿಕೆ ಇದೆ. ಅವರ ಹಠ ಮುಂದುವರೆಸಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಜನರು ಎಲ್ಲವನ್ನು ನೋಡ್ತಿದ್ದಾರೆ. ಅವರೇ ಅರ್ಥ ಮಾಡಿಕೊಳ್ತಾರೆ ಎಂದಿದ್ದಾರೆ.