ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸೋದು ಕಾಂಗ್ರೆಸ್ ಗೂ ಅಸಾಧ್ಯ : ಕುಮಾರಸ್ವಾಮಿ ಹೇಳಿದ್ದೇನು..?

1 Min Read

ಮೈಸೂರು: ನವೆಂಬರ್ ತಿಂಗಳಲ್ಲಿ ನವೆಂಬರ್ ಕ್ರಾಂತಿಯದ್ದೇ ಜೋರು ಚರ್ಚೆಯಾಗ್ತಾ ಇದೆ. ಆದರೆ ದಿನಕಳೆದಂತೆ ನವೆಂಬರ್ ಕ್ರಾಂತಿಯೂ ಸೆಪ್ಟೆಂಬರ್ ಕ್ರಾಂತಿಯ ರೀತಿಯೇ ಠುಸ್ ಪಠಾಕಿ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ. ನವೆಂಬರ್ ಕ್ರಂಅತಿ ಅಂದ್ರೆ ಸಿದ್ದರಾಮಯ್ಯ ಅವರು ಸಿಎಂ ಖುರ್ಚಿ ಬಿಟ್ಟು ಕೊಡುವುದು. ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನನಗೆ ಕ್ರಾಂತಿ ವಿಚಾರದಲ್ಲಿ ನಂಬಿಕೆ ಇಲ್ಲ. ಬಹಳ ಜನ ಕ್ರಾಂತಿ ಕ್ರಾಂತಿ ಅಂತ ಚರ್ಚೆ ಮಾಡ್ತಾ ಇದ್ದಾರೆ. ಇಲ್ಲಿ ಕ್ರಾಂತಿಯು ಆಗಲ್ಲ ವಾಂತಿಯು ಆಗಲ್ಲ ನನ್ನ ಅಭಿಪ್ರಾಯದಲ್ಲಿ. ನಮ್ಮಲ್ಲಿಯೇ ಇದ್ದವರು ಅಲ್ವಾ ಹೀಗಾಗಿ ನಮಗೆ ಎಲ್ಲಾ ಗೊತ್ತು. ಅವರು ಏನು ಮಾಡಬಹುದು ಎಂಬುದು ಕೂಡ ನಮಗೆ ಚೆನ್ನಾಗಿ ಗೊತ್ತು. ಕಾಂಗ್ರೆಸ್ ನಲ್ಲೂ ಅಷ್ಟು ಸುಲಭವಿಲ್ಲ ಅವರನ್ನು ತೆಗೆಯುವುದಕ್ಕೆ. ಅವರು ಏನು ಮಾತುಕತೆ ಮಾಡಿಕೊಂಡಿದ್ದಾರೆ ಅನ್ನೋದು ನಮಗೆ ಸಂಬಂಧವಿಲ್ಲ. ನಾನು ಹೇಳೋದು ಒಂದೆ ನೀವೂ ಕ್ರಾಂತಿಯಾದ್ರು ಮಾಡಿ, ವಾಂತಿನಾದ್ರು ಮಾಡಿ ನಾಡಿನ ಜನತೆಯ ಕಷ್ಟವನ್ನು ಬಗೆಹರಿಸಿ ಎಂದಿದ್ದಾರೆ.

ಇದೇ ವೇಳೆ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿ, ಅವರು ಏನು ಮಾತುಕತೆ ಮಾಡಿಕೊಂಡಿದ್ದಾರೆ ಅನ್ನೋದು ನಮಗೆ ಸಂಬಂಧವಿಲ್ಲ. ದೇವರ ಜೊತೆಗೆ ಚರ್ಚೆ ಮಾಡ್ತಾ ಇರ್ತಾರೆ. ಮುಖ್ಯಮಂತ್ರಿ ಯಾವಾಗ ಆಗ್ತೀನಿ ಅಂತ ದೇವರ ಬಳಿ ಚರ್ಚೆ ಮಾಡ್ತಾ ಇರ್ತಾರೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಕನಸಿನ ಬಗ್ಗೆ ಕುಮಾರಸ್ವಾಮಿ ಅವರು ವ್ಯಂಗ್ಯ ಮಾಡಿದ್ದಾರೆ.

Share This Article
Enable Notifications OK No thanks