ಬಿಜೆಪಿ ಅಬ್ಬೇಪಾರಿ, ಅಧ್ಯಕ್ಷ ಬೀದಿಪಾಲು : ಪ್ರಧಾನಿ ಮೋದಿ ರೋಡ್ ಶೋ ವೇಳೆ ರಾಜ್ಯ ನಾಯಕರಿಗೆ ಮಿನಿಮಮ್ ಮರ್ಯಾದೆಯೂ ಇಲ್ಲ ಅಂತ ಕುಟುಕಿದ ಕಾಂಗ್ರೆಸ್..!

ಬೆಂಗಳೂರು:  ಚಂದ್ರಯಾನ-3 ಸಕ್ಸಸ್ ಆದ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಬೆಂಗಳೂರಿಗೆ ಬಂದಿದ್ದರು. ಪೀಣ್ಯದ ಇಸ್ರೋ ಸಂಸ್ಥೆಗೆ ಭೇಟಿ ನೀಡಿದ್ದಾರೆ. ಇಸ್ರೋ ವಿಜ್ಞಾನಿಗಳನ್ನು ಮನಸ್ಸಾರೆ ಹೊಗಳಿ, ತಬ್ಬಿಕೊಂಡು ಸಂತಸವನ್ನು ವ್ಯಕ್ತಪಡಿಸಿದರು. ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಮತ್ತೆ ವಾಪಾಸ್ಸಾದರು. ಈ ವೇಳೆ ಪ್ರಧಾನಿ ಮೋದಿಯಿಂದ ರೋಡ್ ಶೋ ನಡೆದಿದೆ. ರೋಡ್ ಶೋ ವೇಳೆ, ಸಾಮಾನ್ಯ ಜನರು ನಿಲ್ಲುವ ಜಾಗ, ಬ್ಯಾರಿಕೇಡ್ ನಿಂದ ಆಚೆಗೆ ಬಿಜೆಪಿಯ ಕೆಲವು ನಾಯಕರು ನಿಂತಿದ್ದರು. ಈ ಫೋಟೋ ಹಾಕಿ ಕಾಂಗ್ರೆಸ್ ತಿರುಗೇಟು ನೀಡಿದ್ದಾರೆ.

ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವವರೆಗೆ
ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ. @BJP4Karnataka ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ.

@BJP4Karnataka ನಾಯಕರದ್ದು ಎಂತಹಾ ದುಸ್ಥಿತಿ. ರಾಜ್ಯ ಬಿಜೆಪಿಯ ‘ದಂಡ’ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ. ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ? ಎಂದು ಟ್ವೀಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *