ಮಂಡ್ಯ: ನನ್ನ ಆಯಸ್ಸು ಅಂತ ನಂಗೆ ಗೊತ್ತಿಲ್ಲ. ನನ್ನ ಪ್ರತಿಕೃತಿ ದಹಿಸಿದ್ರೆ ನಾನೇನು ಸತ್ತು ಹೋಗಲ್ಲ. ಎಲ್ಲರು ಒಟ್ಟಾಗಿ ಬಾಳೋದು, ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಜೀವನ ಕಳೆಯಬೇಕು. ಕೆಡಕು ಬಯಸದೇ ಇರುವುದೇ ಧರ್ಮ. ಬಿಜೆಪಿಯವರಂಥ ಕೊಳಕರು, ಜಾತಿವಾದಿಗಳು ಬೇರೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಜಿಲ್ಲೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಕುರುಬರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕನಕದಾಸರನ್ನು ಬಿಟ್ಟು ಈಗ ರಾಯಣ್ಣನನ್ನು ಹಿಡಿದುಕೊಂಡಿದ್ದಾರೆ. ರಾಯಣ್ಣನತ್ತ ಒಲವಿಗೆ ನನಗೆ ತಕರಾರಿಲ್ಲ. ಆದ್ರೆ ಕನಕದಾಸರನ್ನು ಬಿಡಬೇಡಿ ಎಂದು ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ ಏನು ಮಾಡಿದ್ದಾರೆಂದು ಪ್ರಶ್ನಿಸುತ್ತಿದ್ದಾರೆ. ರಾಯಣ್ಣ ಹೆಸರಲ್ಲಿ ಸೈನಿಕ ಶಾಲೆಗೆ 260 ಕೋಟಿ ಕೊಟ್ಟಿದ್ದೆ. ಈ ಮೊದಲು ಕುರಿಬರ ಮಠ ಎಲ್ಲಿತ್ತು. ಆ ಮಠವನ್ನ ಮಾಡಿದ್ದು ನಾನು. ಮಂಡ್ಯ ಜಿಲ್ಲೆಯ ಜನ ಯಾರ ಮಾತನ್ನು ಕೇಳಬೇಡಿ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರ್ಬೇಕು ಅಂದ್ರೆ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಜನರಿಗೆ ಮನವಿ ಮಾಡಿದ್ದಾರೆ.