ಬೆಂಗಳೂರು: ಸದನದಲ್ಲಿ ಕಮಿಷನ್ ವಿಚಾರ ಪ್ರಸ್ತಾಪಿಸಲು ಕಾಂಗ್ರೆಸ್ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆ ಸಂಬಂಧ ವಿನೂತನ ಹೋರಾಟಕ್ಕೂ ಸಜ್ಜಾಗಿದೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಮಾತನಾಡಿದ್ದಾರೆ.
ನಮ್ಮ ಕಾಲದಲ್ಲಿ ಹಗರಣಗಳು ಆಗಿವೆ ಅಂತ ಹೇಳುತ್ತಾರೆ. ನಮ್ಮ ಸರ್ಕಾರ ಇದ್ದಾಗ ಇವರು ಏನು ಮಾಡುತ್ತಿದ್ದರು..? ತನಿಖೆ ಮಾಡಿ ಎಂದು ನಾನು ಈಗಲೂ ಒತ್ತಾಯಿಸುತ್ತೇನೆ. 2006ರಿಂದಲೂ ಇಲ್ಲಿಯವರೆಗೆ ತನಿಖೆ ಮಾಡಿ ಎಂದಿದ್ದೇನೆ. ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿಯೆ ತನಿಖೆಯಾಗಲಿ. ಇದಕ್ಕಿಂತ ನಾನು ಇನ್ನೇನನ್ನು ಹೇಳುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಬಿಜೆಪಿಯ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಂದಿನಿಂದಲೂ ಧ್ವನಿ ಎತ್ತಿದೆ. ಟ್ವಿಟ್ಟರ್ ನಲ್ಲಿ ಅಭಿಯಾನ ಕೂಡ ಶುರು ಮಾಡಿತ್ತು. ಆ ಸಂಬಂಧ ವೆಬ್ ಸೈಟ್ ಕೂಡ ಬಿಡುಗಡೆ ಮಾಡಿದೆ. ಇದೀಗ ಸದನದಲ್ಲಿಯೂ ಈ ಬಗ್ಗೆ ಪ್ತಸ್ತಾಪ ಮಾಡಲು ಹೊರಟಿದೆ.