ಬೆಂಗಳೂರು: ಈಶ್ವರಪ್ಪ ರಾಜೀನಾಮೆ ಘೋಷಣೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಟಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಈಶ್ವರಪ್ಪ ಮಾತನ್ನು ನಾವೂ ನಂಬುವುದಿಲ್ಲೆಂದಿದ್ದಾರೆ. ಈಶ್ವರಪ್ಪ ಕೊಟ್ಟ ಮಾತಿನಂತೆ ಯಾವತ್ತು ನಡೆಯುವುದಿಲ್ಲ. ನಾವಾಗಲೀ, ಶಾಸಕರಾಗಲೀ ಈಶ್ಚರಪ್ಪ ರಾಜೀನಾಮೆ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಸಂತೋಷ್ ಬರೆದ ಡೆತ್ ನೋಟಲ್ಲಿ ಭ್ರಷ್ಟಾಚಾರದ ಬಗ್ಗೆ ಬರೆದಿದ್ದಾರೆ. ಅವರ ಮೇಲೆ ಮೊದಲು ಕೇಸು ದಾಖಲಿಸಬೇಕು. ಕೇಸ್ ದಾಖಲಿಸಿ ಈಶ್ವರಪ್ಪ ಅವರನ್ನು ಮೊದಲು ಬಂಧಿಸಬೇಕು. ಬಂಧಿಸುವ ಕೆಲಸ ಮಾಡಲಿ.
ಇನ್ನು ಸಿದ್ದರಾಮಯ್ಯ ಮಾತನಾಡಿ, ಈಶ್ವರಪ್ಪ ಅವರು ಇವತಚತು ರಾಜೀನಾಮೆ ಘೋಷಿಸಿದ್ದಾರೆ. ಆ ಬಗ್ಗೆ ನಮ್ಮ ಪಲ್ಷದ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ. ಈಶ್ವರಪ್ಪ ಅವರು ಇಲ್ಲಿವರೆಗೆ ಸುಳ್ಳೆಳಿಕೊಂಡು ಬಂದಿದ್ದಾರೆ. ನಮ್ಮ ಹೋರಾಟ ಚುರುಕಾದ ಮೇಲೆ ಇವತ್ತು, ನಾಳೆ ಸಂಜೆ ರಾಜೀನಾಮೆ ಕೊಡುತ್ತೇನೆಂದು ಘೋಷಣೆ ಮಾಡಿದ್ದಾರೆ. ಅದರ ಅರ್ಥ ಅವರು ಏನು 40% ಲಂಚ ತೆಗೆದುಕೊಂಡಿದ್ದಾರೆಂದು ಸಂತೋಷ್ ಪಾಟೀಲ್ ಆರೋಪ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಅವರ ತಪ್ಪು ಅರಿವಾಗಿದೆ ಎಂಬು ಭಾವಿಸುತ್ತೇನೆ.
ಯಾಕಂದ್ರೆ ಈಶ್ವರಪ್ಪನವರು ನನಗೆ ಗೊತ್ತೆ ಇಲ್ಲ ಸಂತೋಷ್ ಎಂದಿದ್ದರು. ಸಂತೋಷ್ ಗೊತ್ತಿಲ್ಲದೆ ಮಾನನಷ್ಟ ಕೇಸ್ ಹಾಕಿದ್ದರಾ..? ಆ ಪಂಚಾಯತ್ ಚೇರ್ ಮನ್ ನಾನು ಮತ್ತು ಸಂತೋಷ್ ಇಬ್ಬರು ಈಶ್ವರಪ್ಪರನ್ನು ಎರಡು ಸಲ ಭೇಟಿ ಮಾಡಿದ್ದೀವಿ ಅಂತ ಹೇಳಿದ್ದರು. ಆ ಪೋಟೋ ಕೂಡ ಎವಿಡೆನ್ಸ್. ಈಶ್ವರಪ್ಪನವರೇ ಕೆಲಸ ಮಾಡಲು ಹೇಳಿದ್ದರು ಎಂದು ಹೇಳಿದ್ದಾರೆ. ಕೆಲಸ ಮಾಡಿದ ಮೇಲೆ ಬಿಲ್ ಕೊಡದ ಪರಿಸ್ಥಿತಿ ಬಂದಾಗ 40% ಪರ್ಸೆಂಟ್ ಕಮೀಷನ್ ಕೇಳೋದಕ್ಕೆ ಶುರು ಮಾಡಿದ್ದಾರೆ. ಕೊಡಲು ಆಗದೆ ಇದ್ದಾಗ, ಕಷ್ಟದಲ್ಲಿದ್ದೇವೆ ಅಂತ ಕೇಳಿ ಕೇಳಿ ಸಾಕಾಗಿ, ಕಿರುಕುಳ ತಾಳದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.