ಅಧಿಕಾರಕ್ಕೆ ಬರುವುದಕ್ಕೆ ಕುದುರೆ ವ್ಯಾಪಾರ ಅನ್ನೋದು ಆಗಾಗ ಪಕ್ಷಗಳಲ್ಲಿ ನಡೆಯುತ್ತಲೆ ಇರುತ್ತದೆ. ಈ ವ್ಯಾಪಾರಕ್ಕೆ ಸಿಲುಕದಂತೆ ತಮ್ಮವರನ್ನು ಕಾಪಾಡಿಕೊಳ್ಳುವುದು ಆಯಾ ಪಕ್ಷದ ಜವಬ್ದಾರಿಯಾಗಿರುತ್ತದೆ. ರೆಸಾರ್ಟ್ ರಾಜಕೀಯ ಅದೇ ಸಲುವಾಗಿ ಆರಂಭವಾಗಿದೆ. ಆದರೆ ಅದನ್ನು ಮೀರಿ ಒಮ್ಮೊಮ್ಮೆ ವ್ಯಾಪಾರ ಕುದುರಿಸಿಬಿಡುತ್ತಾರೆ. ಈ ಬಾರಿ ರಾಜಸ್ಥಾನದಲ್ಲಿ ಅಂತದ್ದೊಂದು ಸನ್ನಿವೇಶಕ್ಕೆ ಎಡೆಮಾಡಿಕೊಡಬಾರದು ಎಂಬ ಕಾರಣಕ್ಕೆ, ಕಾಂಗ್ರೆಸ್ ಇಂಟರ್ ನೆಟ್ ಅನ್ನೇ ಕಟ್ ಮಾಡಿಸಿದೆ.
ಶುಕ್ರವಾರ ಸಂಸತ್ತಿನ ಮೇಲ್ಮನೆಗೆ ಮತದಾನ ನಡೆಯಲಿದೆ. ಈ ಕಾರಣಕ್ಕೆ ಬಿಜೆಪಿ ತಮ್ಮ ಶಾಸಕರನ್ನು ಸೆಳೆಯುತ್ತದೆ ಎಂಬ ಭಯಕ್ಕೆ ಅಮೇರ್ ಪ್ರದೇಶದ ಹೊಟೇಲ್ ಲೀಲಾಗೆ ಶಾಸಕರನ್ನು ಸ್ಥಳಾಂತರಿಸಲಾಗಿದೆ. ಯಾವುದೇ ರೀತಿಯಲ್ಲೂ ಸ್ಥಳಾಂತರಿಸಬಾರದು ಎಂಬ ಕಾರಣಕ್ಕೆ ಅಮೇರ್ ಪ್ರದೇಶದಲ್ಲಿ ಇಂಟರ್ ನೆಟ್ ಸೌಲಭ್ಯವನ್ನೇ ಕತ್ತರಿಸಲಾಗಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ 108 ಶಾಸಕರ ಬಲವನ್ನು ಹೊಂದಿದೆ. ಗೆಲ್ಲಲು ಬೇಕಿರುವುದು 41 ಮತ. 26 ಹೆಚ್ಚುವರಿ ಮತಗಳಿವೆ. ಇನ್ನು 15 ಮತಗಳ ಅಗತ್ಯತೆ ಇದ್ದು, ಅದು ಸಿಕ್ಕಿಬಿಟ್ಟರೆ ಮೂರನೇ ಅಭ್ಯರ್ಥಿಯು ಗೆದ್ದ ಹಾಗೇ ಆಗುತ್ತೆ. ಬಿಜೆಪಿ 71 ಶಾಸಕರ ಬಲವನ್ನು ಹೊಂದಿದೆ. ಮೊದಲ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಿಕೊಂಡು ಬರಬಹುದು. 30 ಮತಗಳು ಹೆಚ್ಚುವರಿ ಇದ್ದು ಅಡ್ಡಮತದಾನ ನಡೆಯುವ ಸಾಧ್ಯತೆ ಇದ್ದು, ಈ ಆತಂಕದಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ಜೋಪಾನ ಮಾಡಿದೆ.