ಕಲಬುರಗಿ: ಪರಿಷತ್ ಚುನಾವಣೆ ದಿನಾಂಕ ಫಿಕ್ಸ್ ಆಗಿದೆ. ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ. ಈ ಮಧ್ಯೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಾ ಹೋಗುತ್ತಿದೆ. ಈ ಮಧ್ಯೆ ಟಿಕೆಟ್ ಸಿಗದೆ ಹೋದರೆ ಬಂಡಾಯ ಏಳುವ ಸಾಧ್ಯತೆಯೂ ಇದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಂಡಾಯ ಏಳಬೇಕೆಂದುಕೊಂಡವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇವತ್ತು ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡರ ಮಾಡ್ತೇವೆ. 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಯಾರಾದ್ರೂ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ರೆ ಅವರನ್ನ ಕೂಡಲೇ ಪಕ್ಷದಿಂದ ಉಚ್ಛಾಟಿಸಲಿದ್ದೇವೆ. ಎರಡು ಸ್ಥಾನಗಳು ಇರೋ ಕಡೆ ಒಬ್ಬರೇ ಅಭ್ಯರ್ಥಿಗಳನ್ನ ಸ್ಪರ್ಧೆಗೆ ನಿಲ್ಲಿಸುತ್ತಿದ್ದೇವೆ ಎಂದಿದ್ದಾರೆ.
ಇನ್ನು ಇದೇ ವೇಳೆ ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, ನಮ್ಮ ಬಗ್ಗೆ ಮಾತನಾಡದಿದ್ರೆ ಬಿಜೆಪಿಗರಿಗೆ ನಿದ್ದೆ ಬರಲ್ಲ. ಅದಕ್ಕೆ ಮಾತಾಡ್ತಾರೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣ ಅಂತ ಇಲ್ಲ. ಇರುವುದು ಒಂದೇ ಅದು ಕಾಂಗ್ರೆಸ್ ಬಣ. ಬಿಜೆಪಿಯವರು ಮೊದಲು ಮಳೆಯಿಂದ ಆಗಿರುವ ಹಾನಿಗೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದ್ದಾರೆ.