Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾಡಿದ ಸಮಾಜಮುಖಿ ಕಾರ್ಯಗಳ  ಪ್ರಚಾರ ಪಡೆಯದಿರುವುದು ಕಾಂಗ್ರೆಸ್‍ ಪಕ್ಷದ ದೌರ್ಭಾಗ್ಯ : ಮಾಜಿ ಸಂಸದ ಬಿ.ಎನ್.ಚಂದ್ರಪ್ಪ

Facebook
Twitter
Telegram
WhatsApp

ಬೆಳಗಾವಿ , (ಜ.25) : ಹನ್ನೆರಡನೇ ಶತಮಾನದಲ್ಲಿ ಬಸವಾದಿ  ಶಿವಶರಣರು ಎದುರಿಸಿದ್ದ ಜಾತಿ-ಜಾತಿ, ಧರ್ಮ-ಧರ್ಮಗಳ ಕಂದಕ ಸಮಸ್ಯೆಗಳು ಈಗಲೂ ಅಂತಹ ವಿಷ ವರ್ತುಲ ಚಟುವಟಿಕೆಗಳು ಮುನ್ನೆಲೆಗೆ ಬರುತ್ತಿದ್ದು, ಈ ಕುರಿತು ಜನ ಜಾಗ್ರತೆ ವಹಿಸಬೇಕು ಎಂದು ಮಾಜಿ ಸಂಸದ ಬಿ.ಎನ್‍.ಚಂದ್ರಪ್ಪ ಅಭಿಪ್ರಾಯಪ-ಟ್ಟರು.

ಸತೀಶ್‍ ಜಾರಕಿಹೊಳಿ ಫೌಂಡೇಶನ್‍ ವತಿಯಿಂದ ಬೆಳಗಾವಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 15 ಸಾವಿರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಅಭ್ಯಾಸ ಪುಸ್ತಕಗಳ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಸುಳ‍್ಳು ವಿಜೃಂಭಿಸುರ್ತಿದೆ. ಒಂದು ಸುಳ‍್ಳನ್ನು ಹತ್ತಾರು ಬಾರಿ ಹೇಳಿ ನಿಜವನ್ನಾಗಿಸುವ ಪ್ರವೃತ್ತಿ ಬಲಗೊಳ‍್ಳುತ್ತಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ  ಬುದ್ಧ, ಬಸವ, ಅಂಬೇಡ್ಕರ್ ತತ್ವದಡಿ ಮಾನವ ಬಂಧುತ್ವ ವೇದಿಕೆಯಲ್ಲಿ ಜನರನ್ನು ಬೆಸೆಯುವ ಕೆಲಸ ಮಾಡುತ್ತಿರುವ ಸತೀಶ್‍ ಜಾರಕಿಹೊಳಿ ಕಾರ್ಯ ಮಾದರಿ ಆಗಿದೆ ಎಂದರು.

ರಾಜ್ಯವೇ ತಮ್ಮ ಕಾರ್ಯವನ್ನು ಪಾಲಿಸುವ ರೀತಿ ಕೆಲಸ ಮಾಡುತ್ತಿದ್ದರೂ ಸತೀಶ್ ಜಾರಕಿಹೊಳಿ ಅವರು ತಾವು ಮಾಡಿದ ಕೆಲಸವನ್ನು ಪ್ರಚಾರ ಮಾಡುವಲ್ಲಿ ಬಹಳ ಹಿಂಜರಿಕೆ ಹೊಂದಿದ್ದಾರೆ.  ಅವರ ಈ ನಡೆ ಪಕ್ಷ ಹಾಗೂ ಅವರಿಗಿಂತಲೂ, ಸಮಾಜಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇಂತಹ ಕಾರ್ಯಗಳು ಹೆಚ್ಚು ಹೆಚ್ಚು ಆಗಬೇಕು. ಸತೀಶ್‍ ಜಾರಕಿಹೊಳಿಯವಂತರು ನಾಡಿನಲ್ಲಿ ಸಹಸ್ರಾರು ಸಂಖ‍್ಯೆಯಲ್ಲಿ ಹೆಚ್ಚಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವ ಜತೆಗೆ ಪ್ರಚಾರ ಪಡೆಯುವ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.

ಕೆಲವರು ಒಂದು ಕೆಜಿ ಹಣ‍್ಣು ಖರೀದಿಸಿ ಆಸ್ಪತ್ರೆಗೆ ಹೋಗಿ ರೋಗಿಗಳಿಗೆ ಕೊಟ್ಟು ದೊಡ್ಡದಾಗಿ ಪ್ರಚಾರ ಪಡೆಯುತ್ತಾರೆ. ಆದರೆ ಕಾಂಗ್ರೆಸ್‍ ಪಕ್ಷದ ಬಹಳಷ್ಟು ನಾಯಕರು ದೊಡ್ಡ ದೊಡ್ಡ ಜನಸೇವೆ, ಸಮಾಜಮುಖಿ ಕಾರ್ಯಗಳನ್ನು ಮಾಡಿದರೂ ಕೂಡ ಪ್ರಚಾರ ಪಡೆಯುವುದಿಲ್ಲ. ಇದು ಕಾಂಗ್ರೆಸ್‍ ಪಕ್ಷದ ದೌರ್ಭಾಗ್ಯ ಎಂದು ಬೇಸರಿಸಿದರು.

ಇಂತಹ ಮನಸ್ಥಿತಿ, ಹಿಂಜರಿಕೆಯಿಂದ ಸತೀಶ‍್‍ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ನಾಯಕರು ಹೊರಬರಬೇಕು. ನಾವುಗಳು ಮಾಡಿದ  ಒಳ್ಳೆ ಕೆಲಸಗಳ ಕುರಿತು ಪ್ರಚಾರ ಪಡೆಯಬೇಕು. ಜತೆಗೆ ವಿಷವರ್ತುಲಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಮನುವಾದಿಗಳು ಸಮಾಜವನ್ನು ಇಬ್ಭಾಗ ಮಾಡುವ ಕೆಲಸಕ್ಕೆ ಬಲವಾಗಿಯೇ ಕೈ ಹಾಕಿದ್ದಾರೆ. ಮತಗಳಿಕೆ, ಅಧಿಕಾರಕ್ಕಾಗಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ಈ ಕುರಿತು ಸತೀಶ‍್ ಜಾರಕಿಹೊಳಿ ರೀತಿ ಬುದ್ಧ, ಬಸವ, ಅಂಬೇಡ್ಕರ್‍ ಸಿದ್ಧಾಂತದಡಿ ನಾವೆಲ್ಲರೂ ದಿಟ್ಟ ಹೆಜ್ಜೆ ಇಡಬೇಕು ಎಂದು ಹೇಳಿದರು.

ಈ ಕಾರ್ಯಕ್ರಮವನ್ನು 12ನೇ ಶತಮಾನದಲ್ಲಿನ ಅನುಭವ ಮಂಟಪದ ರೀತಿ ಆಯೋಜಿಸಲಾಗಿದೆ. ಎಲ್ಲ ಜಾತಿ, ಧರ್ಮದವರನ್ನು ಗುರುತಿಸಿ ವೇದಿಕೆಯಲ್ಲಿ ಕೂರಲು ಅವಕಾಶ ಕೊಡಲಾಗಿದೆ. ಮಾದಿಗ ಸಮುದಾಯದ ನನ್ನನ್ನು ದೂರದ ಚಿತ್ರದುರ್ಗದಿಂದ ಇಲ್ಲಿಗೆ ಕರೆಯಿಸಿ, ನನ್ನ ಕೈಯಿಂದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಿರುವ ಸತೀಶ‍್‍ ಜಾರಕಿಹೊಳಿ, ನಿಜಕ್ಕೂ ವಿಶಾಲ ಹೃದಯವಂತ ಎಂಬುದಕ್ಕೆ ಸಾಕ್ಷಿ. ಅವರಿಗೆ ನಾನು ಸದಾ ಕೃತಜ್ಞ ಎಂದರು.

ಪುಸ್ತಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್‍, ಸತೀಶ‍್‍ ಜಾರಕಿಹೊಳಿ ಅವರು  ಜನಪಯೋಗಿ ಕಾರ್ಯಕ್ರಮಗಳ ಮೂಲಕ ಸದ್ದಿಲ್ಲದೇ ಜನರ ಮನಗೆಲ್ಲುರ್ತಿದ್ದಾರೆ. ಅವರ ಕಾರ್ಯಕ್ರಮಗಳು ನಮ್ಮೆಲ್ಲರಿಗೂ ಮಾದರಿ ಎಂದು ಹೇಳಿದರು.

ಮಕ್ಕಳಿಗೆ ಪುಸ್ತಕ ವಿತರಿಸುವ ಕಾರ್ಯ ಬಹುದೊಡ್ಡ ಸೇವೆ ಆಗಿದೆ. ಇದೇ ರೀತಿ ಅವರು ಹೆಚ್ಚು ಹೆಚ್ಚು ಕೆಲಸಗಳನ್ನು ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಸರಳ, ಸಜ್ಜನಿಕೆ ಕಾರಣಕ್ಕೆ ಬಿ.ಎನ್‍.ಚಂದ್ರಪ್ಪ ಅವರು ಎಲ್ಲ ನಾಯಕರ ವಿಶ‍್ವಾಸ ಗಳಿಸಿದ್ದಾರೆ. ಬರುವ ದಿನದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಈಗಾಗಲೇ ಖಚಿತವಾಗಿದೆ. ಚಂದ್ರಪ್ಪ ಅವರ ಸೇವಾಮನೋಭಾವ, ಸರಳತೆ, ಅವರು ಮಾಡಿದ   ಅಭಿವೃದ್ಧಿ ಕಾರ್ಯಗಳನ್ನು ಜನ ಮೆಲುಕು ಹಾಕುತ್ತಿದ್ದಾರೆ ಎಂದರು.

ಸತೀಶ್‍ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಸಾವಯವ ಕೃಷಿ ಉನ್ನತ ಸಮಿತಿ ಮಾಜಿ ಅಧ್ಯಕ್ಷ, ಚಿತ್ರದುರ್ಗ ವಿಧಾನಪರಿಷತ್ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿ.ಸೋಮಶೇಖರ್, ಶಾಸಕರಾದ ಚಳ‍್ಳಕೆರೆಯ ಟಿ.ರಘುಮೂರ್ತಿ, ಲಕ್ಷ್ಮೀ ಹೆಬ್ಬಾಳ್ಕರ್, ಮಹಾಂತೇಶ ಶಿವಾನಂದ ಕೌಜಲಗಿ ಮತ್ತಿತರರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!