ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಏ. 14 :
ಅಂಬೇಡ್ಕರ್‌ರವರು ತೀರಿ ಹೋದ ದಿನದಂದು ಅವರ ಸಂಸ್ಕಾರಕ್ಕೆ ದೆಹಲಿಯಲ್ಲಿ 6 × 3 ಅಡಿ ಜಾಗ ನೀಡಲಿಲ್ಲ. ಆದರೆ ನೆಹರುರವರಿಗೆ 52.6 ಎಕರೆ, ಇಂದಿರಾಗಾಂಧಿಯವರಿಗೆ 45 ಎಕರೆ ಹಾಗೂ ರಾಜೀವ್ ಗಾಂಧಿಯವರಿಗೆ 15 ಎಕರೆ ಒಟ್ಟಾರೆ ನೆಹರು ಕುಟುಂಬಕ್ಕೆ 110 ಎಕರೆಗೂ ಹೆಚ್ಚು ಜಾಗ ನೀಡಿದ್ದೀರಿ. ಆದರೆ ಅಂಬೇಡ್ಕರ್ ರವರಿಗೆ 6*3 ಜಾಗ ನೀಡಲಿಲ್ಲ. ಅಂಬೇಡ್ಕರ್ ರವರ ಮೃತದೇಹವನ್ನು ತೆಗೆದುಕೊಂಡು ಹೋಗಲು ಟ್ರಾನ್ಸ್ ಪೋರ್ಟ್ ವ್ಯವಸ್ಥೆ ಸಹ ನೀಡಲಿಲ್ಲ. ಇದು ಕೇವಲ ದಲಿತರಿಗೆ ಮಾಡಿದ ಅಪಮಾನವಲ್ಲ.. ಇದು ರಾಷ್ಟ್ರೀಯ ಅಪಮಾನ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕರಾದ ವಿದಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ತಿಳಿಸಿದರು.
ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂತಹ ಮಹಾನ್ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ನಮ್ಮ ರಾಷ್ಟ್ರದ ಪ್ರಧಾನಮಂತ್ರಿಯಾಗಿ ಮಾಡಬಹುದಾಗಿತ್ತು. ಪ್ರಧಾನಮಂತ್ರಿ ಮಾತು ದೂರ ಉಳಿಯಿತು.. ಕೊನೆಗೆ ಎಂಪಿ ಯನ್ನಾಗಿ ಆದರೂ ಮಾಡಬಹುದಾಗಿತ್ತು.. ಅತ್ಯಂತ ಅವಮಾನೀಯವಾಗಿ ಸೋಲಿಸಿದ ಪಕ್ಷ ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರನ್ನು ಸೋಲಿಸಿದ ನಾರಾಯಣ ಸದೋಬ ಕಜ್ರೋಲ್ಕರ್ ರವರಿಗೆ ಕಾಂಗ್ರೆಸ್ ಪಕ್ಷ ಪದ್ಮ ವಿಭೂಷಣ ಪ್ರಶಸ್ತಿ ಕೊಟ್ಟು ಗೌರವಿಸುತ್ತೆ. ಅಂಬೇಡ್ಕರ್ ರವರ ಅಂತ್ಯದವರೆಗೂ ಕಾಂಗ್ರೆಸ್ ಪಕ್ಷ ಭಾರತರತ್ನ ಪ್ರಶಸ್ತಿ ಕೊಡಲಿಲ್ಲ.. ಅಂಬೇಡ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದು ಅಟಲ್ ಬಿಹಾರಿ ವಾಜಪೇಯಿಯವರು ಎಂದರು.
ದಲಿತರ ಬದುಕಿಗೆ ಸೂರ್ಯನಂತೆ ಕೆಲಸ ಮಾಡಿದ… ಈ ದೇಶದ ಬೆಳಕು ಅಂಬೇಡ್ಕರ್ ರವರ ಜಯಂತಿಯನ್ನು ಬಿಜೆಪಿ ಇಂದು ಆಚರಣೆ ಮಾಡುತ್ತಿದೆ.ಹಿಂದೂ ಸಮಾಜದ ಪುನರುತ್ಥಾನದ ಚೇತನ ಅಂಬೇಡ್ಕರ್ ರವರು… ದಲಿತರನ್ನು.. ಅಸ್ಪೃಶ್ಯರನ್ನು.ಮನುಷ್ಯರಂತೆ ಕಾಣಬೇಕೆಂದು ವಾದಿಸಿದ ಮಹಾನ್ ಮಾನವತವಾದಿ.ನವೆಂಬರ್-26 ಸಂವಿಧಾನವನ್ನು ಜಾರಿಯಾದ ದಿನವನ್ನು ಸಂವಿಧಾನ ಸಂಸ್ಥಾಪನಾ ದಿನವನ್ನಾಗಿ ಮಾಡಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಪಕ್ಷ ದಲಿತರನ್ನು ಕೇವಲ ಮತ ಬ್ಯಾಂಕ್‍ನ್ನಾಗಿ ಮಾಡಿಕೊಂಡಿದೆ… ಕಾಂಗ್ರೆಸ್ ನವರು ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಲಿಲ್ಲ. ಅಂಬೇಡ್ಕರ್ ರವರ ಜನ್ಮಭೂಮಿಯನ್ನು ಬಿಜೆಪಿ ಪಕ್ಷ ಅಭಿವೃದ್ಧಿಪಡಿಸಿದೆ.. ಅಂಬೇಡ್ಕರ್ ರವರು ಲಂಡನ್ ನಲ್ಲಿ ಓದಿದ ಜಾಗವನ್ನು ಮ್ಯೂಸಿಯಂನ್ನಾಗಿ ಮಾಡಿದೆ ಎಂದು ರವಿ ಕುಮಾರ್ ತಿಳಿಸಿದರು.
ದೇಶದಲ್ಲಿ ಕೋಮುಗಲಭೆ ಹೆಚ್ಚಾಗಲು ಕಾರಣ ಕಾಂಗ್ರೆಸ್ ಪಕ್ಷ. ವಿಧಾನಸೌಧದಲ್ಲಿ ನಿಂತುಕೊಂಡು ಪಾಕಿಸ್ತಾನ ಜಿಂದಾಬಾದ್ ಕೂಗಿದವರನ್ನು ರಕ್ಷಣೆ ಮಾಡುವ ಪಕ್ಷ ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ರವರಿಗೆ ಅಪಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ಸ್ವತಃ ಅಂಬೇಡ್ಕರ್ ರವರೇ ಹೇಳಿದ್ದರು ಕಾಂಗ್ರೆಸ್ ಪಕ್ಷ ಎನ್ನುವುದು ಒಂದು ಉರಿಯುವ ಮನೆ… ಆ ಪಕ್ಷಕ್ಕೆ ನಾನು ಎಂದು ಕಾಲಿಡಲ್ಲ ಅಂತ ಹೇಳಿದ್ದರು. ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದೇ ಅಂಬೇಡ್ಕರ್ ಅವರಿಗೆ ಮಾಡುವ ಸನ್ಮಾನ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಹಳ ದಿನ ಇರಲ್ಲ… ನಾವು ಯಾವುದೇ ಆಪರೇಷನ್ ಮಾಡಲ್ಲ… ಅವರೇ ಮಾಡಿದಂತ ಕುತಂತ್ರ ಕೆಲಸಗಳಿಂದ ಸರ್ಕಾರ ಬಿದ್ದು ಹೋಗುತ್ತೆ ರವಿಕುಮಾರ್ ಭವಿಷ್ಯ ನುಡಿದರು.
ಕೆ.ಹೆಚ್ ಮುನಿಯಪ್ಪ ರವರನ್ನು ಕೋಲಾರದಲ್ಲಿ ಸೋಲಿಸಿದವರು ಸಿದ್ದರಾಮಯ್ಯನವರು… ಪರಮೇಶ್‍ರವರು ಗೆದ್ದರೆ ಮುಖ್ಯಮಂತ್ರಿ ಆಗಿಬಿಡುತ್ತಾರೆ ಎಂದು ಅವರನ್ನು ಸೋಲಿಸಿದವರು ಸಿದ್ದರಾಮಯ್ಯನವರೆ… ದಲಿತ ವಿರೋಧಿ ಸಿದ್ದರಾಮಯ್ಯನವರು.ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ರವರನ್ನು ತಂತ್ರ- ಕುತಂತ್ರದಿಂದ ದೆಹಲಿಗೆ ಕಳಿಸಿದ್ದಾರೆ. 11144 ಕೋಟಿ ರೂ ದಲಿತರಿಗೆ ಖರ್ಚು ಮಾಡದೆ ಬೇರೆ ಇಲಾಖೆಗೆ ವರ್ಗಾವಣೆ ಮಾಡಿರುತ್ತಾರೆ ಎಂದು ದೂರಿದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ ಛಲವಾದಿ ಉಪಸ್ಥಿತರಿದ್ದರು.