Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ಸಂಸದ ಧೀರಜ್ ಸಾಹು  ಕೋಟ್ಯಾಂತರ ರೂಪಾಯಿ ಅಕ್ರಮ ಹಣ ಪತ್ತೆ : ಚಿತ್ರದುರ್ಗದಲ್ಲಿ ಬಿಜೆಪಿ ಪ್ರತಿಭಟನೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.11 : ಒಡಿಸ್ಸಾದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಕೋಟ್ಯಾಂತರ ರೂ.ಗಳ ಅಕ್ರಮ ಎಸಗಿರುವುದನ್ನು ಖಂಡಿಸಿ ಭಾರತೀಯ ಜನತಾಪಾರ್ಟಿ ಜಿಲ್ಲಾ ಘಟಕದಿಂದ ಸೋಮವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಧೀರಜ್‍ಸಾಹು ಬಳಿ ಸಿಕ್ಕಿರುವ ಹಣವನ್ನು ನಲವತ್ತರಿಂದ ಐವತ್ತು ಯಂತ್ರಗಳ ಮೂಲಕ ನೂರ ಐವತ್ತು ಮಂದಿ ಆರು ದಿನಗಳಿಂದ ಎಣಿಸುತ್ತಿದ್ದರೂ ಇನ್ನು ಪೂರ್ತಿಯಾಗಿಲ್ಲ. ಇದುವರೆವಿಗೂ 354 ಕೋಟಿ ರೂ.ಗಳು ಪತ್ತೆಯಾಗಿರುವುದನ್ನು ನೋಡಿದರೆ ಕಾಂಗ್ರೆಸ್ ಲೂಟಿಕೋರ, ಭ್ರಷ್ಠ ಸರ್ಕಾರ ಎನ್ನುವುದು ಗೊತ್ತಾಗುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಇಂತಹ ದೊಡ್ಡ ಭ್ರಷ್ಠಾಚಾರ ನಡೆದಿರುವುದನ್ನು ಇದುವರೆವಿಗೂ ದೇಶದ ಜನ ಕಂಡಿರಲಿಲ್ಲ. ಕೂಲಂಕುಶ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಬಿಜೆಪಿ.ಜಿಲ್ಲಾ ಉಪಾಧ್ಯಕ್ಷ ಸಂಪತ್‍ಕುಮಾರ್, ನಗರಾಧ್ಯಕ್ಷ ನವೀನ್‍ಚಾಲುಕ್ಯ, ಕಲ್ಲೇಶಯ್ಯ ಕೆ. ಮಲ್ಲಿಕಾರ್ಜುನ್, ಗೌರಣ್ಣ, ವೆಂಕಟೇಶ್‍ಯಾದವ್, ಡಿ.ಕೆ.ಜಯಣ್ಣ, ಎಲ್.ವಿ.ಪ್ರಶಾಂತ್, ನಾಗರಾಜ್‍ಬೇದ್ರೆ, ದಗ್ಗೆಶಿವಪ್ರಕಾಶ್, ನಂದಿ ನಾಗರಾಜ್, ತಿಪ್ಪೇಸ್ವಾಮಿ, ಕಿಟ್ಟಿ, ಕಿರಣ, ಶಂಭು, ಅನಿಲ್‍ಭರತ್, ಕುಮಾರ್, ರಾಮು, ಚಂದ್ರು, ಉಷಾ ಬೇದ್ರೆ, ಕವನ, ವೀಣ, ಹರೀಶ್, ಅನಿಲ್‍ಕುಮಾರ್ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಪೋಟಾ ಹಣ್ಣುಗಳನ್ನು ತಿಂದರೆ ಎಷ್ಟೆಲ್ಲಾ  ಪ್ರಯೋಜನಗಳು ಗೊತ್ತಾ ?

      ಸುದ್ದಿಒನ್ : ನಿಸರ್ಗ ದಯಪಾಲಿಸಿದ ಹಲವು ಹಣ್ಣುಗಳಲ್ಲಿ ಯಾವುದನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ಬಗ್ಗೆ ಸರಿಯಾದ ತಿಳುವಳಿಕೆ ಇರಬೇಕು. ಸಪೋಟಾ ಹಣ್ಣನ್ನು ದೈನಂದಿನ ಆಹಾರದಲ್ಲಿ ಕಡ್ಡಾಯವಾಗಿ ಸೇವಿಸಬೇಕು. ಇದು

ಈ ಪಂಚರಾಶಿಗಳ ನಿಂತಿರುವ ಮದುವೆ ಕಾರ್ಯ, ಗುತ್ತಿಗೆದಾರರ ಕಾಮಗಾರಿ, ಹಳೆಯ ಬಿಲ್ ಮರುಪಾವತಿ ಸಿಹಿ ಸಂದೇಶ ಪಡೆಯಲಿದ್ದೀರಿ

ಈ ಪಂಚರಾಶಿಗಳ ನಿಂತಿರುವ ಮದುವೆ ಕಾರ್ಯ, ಗುತ್ತಿಗೆದಾರರ ಕಾಮಗಾರಿ, ಹಳೆಯ ಬಿಲ್ ಮರುಪಾವತಿ ಸಿಹಿ ಸಂದೇಶ ಪಡೆಯಲಿದ್ದೀರಿ, ಗುರುವಾರ- ರಾಶಿ ಭವಿಷ್ಯ ಫೆಬ್ರವರಿ-22,2024 ಸೂರ್ಯೋದಯ: 06:43, ಸೂರ್ಯಾಸ್ತ : 06:16 ಶಾಲಿವಾಹನ ಶಕೆ1944, ಶುಭಕೃತ

ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಶಿವಲಿಂಗಪ್ಪ ನಿಧನ

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 21 : ಎಸ್.ಜೆ.ಎಂ ಕಲಾ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪಿ. ಶಿವಲಿಂಗಪ್ಪನವರು (63) ಅನಾರೋಗ್ಯದಿಂದ ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರಿಗೆ ಪತ್ನಿ

error: Content is protected !!