ಕಾರವಾರ: ಕಾಂಗ್ರೆಸ್ ನಲ್ಲಿ ಮಂತ್ರಿಗಿರಿ ಮಾತ್ರವಲ್ಲ ಸಿಎಂ ಕುರ್ಚಿಗಾಗಿಯೇ ಗುದ್ದಾಟ ನಡೀತಾ ಇದೆ. ಒ.ಮದು ವೇಳೆ ಅಧಿಕಾರಕ್ಕೆ ಆಸೆ ಪಡುವವರು ಬಿಜೆಪಿಗೆ ಬಂದ್ರೆ ಅಂದ್ರೆ ಒಂದು ಗುಂಪು ಬಿಜೆಪಿಗೆ ಬಂದ್ರೆ ಸರ್ಕಾರ ರಚಿಸ್ತೀರಾ ಎಂಬ ಪ್ರಶ್ನೆಗೆ ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನ ನೀಡಿದ್ದಾರೆ. ಬಿಜೆಪಿಯನ್ನ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ವಿಪಕ್ಷದವರಾಗಿ ಸರ್ಕಾರವನ್ನು ಕಿವಿ ಹಿಂಡುವ ಕೆಲಸವನ್ನ ಮಾಡ್ತಾ ಇದ್ದೇವೆ. ಮುಂದೆಯೂ ಮಾಡ್ತೇವೆ. ಯಾವುದೇ ಕಾರಣಕ್ಕೂ ಸರ್ಕಾರ ಮಾಡುವುದಕ್ಕೆ ಆಸಕ್ತಿ ಇಲ್ಲ ಎಂದಿದ್ದಾರೆ.
ಇದೆ ವೇಳೆ ಸರ್ಕಾರದ ಯೋಜನೆಗಳಿಗೂ ರಾಜ್ಯ ಸರ್ಕಾರ ಯಾವುದೇ ರೀತಿಯ ಬೆಂಬಲ ನೀಡದೆ, ಕೆಲಸಗಳು ಹಾಗೇ ನಿಲ್ಲುತ್ತಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ದೊಡ್ಡ ಷಡ್ಯಂತ್ರ, ಕುತಂತ್ರ ಇದು. ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳನ್ನು ಸರಿಯಾದ ರೀತಿ ಅನುಷ್ಠಾನ ಮಾಡದೆ, ನಿಮಗೆಲ್ಲಾ ಗೊತ್ತಿದೆ ಈ ಹಿಂದಿನ ಪದ್ಧತಿ ಬದಲಾಗಿದೆ. ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಿಗೆ ಹಣ ಬಿಡುಗಡೆಯಾಗಬೇಕಾದ್ರೆ ರಾಜ್ಯ ಸರ್ಕಾರ ಅದರ ಪ್ರೋಗ್ರೆಸ್ ಕಾರ್ಡ್ ಅನ್ನ ನೀಡಬೇಕಾಗಿರುತ್ತದೆ. ಕೇಂದ್ರಕ್ಕೆ ಯಾವುದೇ ವರದಿಯನ್ನು ನೀಡದೆ, ಕೇಂದ್ರ ಸರ್ಕಾರ ಹಣ ನೀಡ್ತಾ ಇಲ್ಲ ಅಂತ ಆರೋಪ ಮಾಡಿದ್ರೆ ಅದಕ್ಕೆ ಕಾರಣ ರಾಜ್ಯ ಸರ್ಕಾರವೆ. ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಮುಚ್ವಿ ಹಾಕಿಕೊಳ್ಳುವುದಕ್ಕೆ ಪದೇ ಪದೇ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಇರುವುದು ನಿರಂತರವಾಗಿ ನಡೆದುಕೊಂಡು ಬರುತ್ತಾ ಇದೆ ಎಂದಿದ್ದಾರೆ.
ಇದೆ ವೇಳೆ ಶಾಸಕ ಯತ್ನಾಳ್ ಮತ್ತೆ ಬಿಜೆಪಿಗೆ ಬರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯತ್ನಾಳ್ ಅವರು ಸಭೆ ನಡೆಸುವುದು ಬಿಡುವುದು ಅವರ ವೈಯಕ್ತಿಕ ವಿಚಾರ. ಹಾಗೇ ಹೈಕಮಾಂಡ್ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ಮಾತನ್ನ ಹೇಳಿದ್ದಾರೆ.

