ಉದಯಪುರ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು, ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದಿಂದ ಸಿದ್ದರಾಮಯ್ಯ, ಡಿಕೆಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇನ್ನು ಗುಲಾಬ್ ನಬಿ, ಹಿರಿಯ ನಾಯಕ ಪಿ ಚಿದಂಬರಂ, ಪ್ರಿಯಾಂಕ ಗಾಂಧಿ ವಾದ್ರಾ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ದೇಶದ ವಿವಿದೆಡೆಯ ನಾಯಕರು ಒಟ್ಟಿಗೆ ಸೇರಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಚಿಂಥನ ಮಂಥನ ನಡೆಸಿದ್ದಾರೆ.
ಈ ಶಿಬಿರದಲ್ಲಿ ಪಕ್ಷ ಸಂಘಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಲ್ಲಿ 70 ವರ್ಷ ಮೇಲ್ಪಟ್ಟವರಿಗೆ ಕೋಕ್ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ. ಇನ್ನು ಹೆಚ್ಚಾಗಿ 35 ವಯೋಮಾನದವರಿಗೆ ಹೆಚ್ಚು ಆದ್ಯತೆ ನೀಡಬೇಕೆಂದು ಮುಕುಲ್ ವಾಸ್ನಿಕ್ ನೇತೃತ್ವದ ಸಂಘಟನಾ ಸಮಿತಿ ಸೂಚಿಸಿದೆ.
ಇನ್ನು ಶಿಬಿರದಲ್ಲಿ ನಾಯಕರು ಹಲವು ವಿಚಾರಗಳ ಮೇಲೆ ಡಿಮ್ಯಾಂಡ್ ಮಾಡಲಾಗಿದೆ ಎನ್ನಲಾಗಿದೆ. ಅಧಿಕಾರ ಹೊಂದಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ಇಂತಿಷ್ಟು ವಯೋಮಿತಿ ವಿಧಿಸಬೇಕು, ಒಂದು ಕುಟುಂಬಕ್ಕ ಒಂದು ಚುನಾವಣೆಯಲ್ಲಿ ಒಂದೇ ಟಿಕೆಟ್ ನೀಡಬೇಕು, ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿದ ನಾಯಕರು ಮೂರು ವರ್ಷಗಳ ಅವಧಿಗೆ ಪಕ್ಷದಲ್ಲಿ ಯಾವುದೇ ಸ್ಥಾನದಲ್ಲಿ ಇರಬಾರದು ಎಂಬ ನಿಯಮಗಳನ್ನು ಶಿಫಾರಸ್ಸು ಮಾಡಿದ್ದಾರೆ.