ಬೆಂಗಳೂರು: ಚುನಾವಣೆ ಹತ್ತಿರ ಇರುವಾಗಲೇ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಗೆ ಸ್ಟ್ರಾಂಗ್ ಅಸ್ತ್ರವೊಂದು ಸಿಕ್ಕಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವನ್ನಪ್ಪಿದ್ದು, ಈಶ್ವರಪ್ಪ ಅವರೇ ಕಾರಣ ಎಂದು ಹೇಳಿದ್ದೇ ತಡ ಈಶ್ಚರಪ್ಪ ಬಂಧನಕ್ಕೆ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ಈಶ್ವರಪ್ಪ ಅರೆಸ್ಟ್ ಆಗಲೇ ಬೇಕು ಎಂದು ಹಠ ಹಿಡಿದಿರುವ ಕಾಂಗ್ರೆಸ್ ನಾಯಕರು, 40% ಕಮಿಷನ್ ವಿಚಾರದಲ್ಲಿ ಇನ್ನು ಎರಡು ವಿಕೆಟ್ ಬೀಳಿಸುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ಬಳ್ಳಾರಿ, ಶಿವಮೊಗ್ಗ, ರಾಮನಗರ, ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಶ್ವರಪ್ಪ ಮುಖವಾಡ ಧರಿಸಿ ಅಣಕು ಪ್ರದರ್ಶನ ನಡೆಸುತ್ತಿದ್ದಾರೆ.
ಹೊಸ ಪೇಟೆಯ ವಿಜಯನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಚಿತ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಪಿಸ್ತೂಲ್ ಹಿಡಿದುಕೊಂಡು, ಈಶ್ವರಪ್ಪ ಕೈಗೆ ಬೇಡಿ ಹಾಕಿ ಬಂಧಿಸುವಂತೆ ಅಣಕುಪ್ರದರ್ಶನ ನಡೆಸಿದ್ದಾರೆ.
ಇನ್ನು ಶಿವಮೊಗ್ಗದಲ್ಲೂ ಕಾಂಗ್ರೆಸ್ ನಾಯಕರು ಪ್ರತಿಭಟಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಸುಂದರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈಶ್ವರಪ್ಪ ಅವರ ಮುಖವಾಡ ಧರಿಸಿ, ಕೈಗೆ ಹಗ್ಗ ಹಾಕಿ ಎಳೆದುಕೊಂಡು ಹೋಗುವಂತೆ ಅಣಕು ಪ್ರದರ್ಶನ ಮಾಡಿದ್ದಾರೆ.
ರಾಮನಗರದ ಡಿಸಿ ಕಚೇರಿ ಮುಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಮೆರವಣಿಗೆ ನಡೆದಿದೆ. ಈಶ್ವರಪ್ಪನನ್ನು ಬಂಧಿಸಲೇಬೇಕೆಂದು ಒತ್ತಾಯಿಸುತ್ತಿದ್ದಾರೆ.