ಬೆಮೆಲ್ ಕಾರ್ಖಾನೆ ಖಾಸಗೀಕರಣಕ್ಕೆ ಕಾಂಗ್ರೆಸ್ ನಾಯಕರ ಆಕ್ಷೇಪ..!

1 Min Read

ಬೆಂಗಳೂರು: ಕೆಜಿಎಫ್ ನ ಬೆಮೆಲ್ ಕಾರ್ಖಾನೆ ಖಾಸಗೀಕರಣಗೊಳಿಸುವ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂದು ವಿಧಾನಪರಿಷತ್ ನಲ್ಲಿ ಈ ವಿಚಾರ ಸಂಬಂಧ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಆಕ್ಷೇಪ ಮಾಡಿದ್ದಾರೆ. ಖಾಸಗಿಕರಣ ಮಾಡಿ ಬೆಮೆಲ್ ಕಾರ್ಖಾನೆ ಮುಚ್ಚುವ ಆರೋಪವನ್ನ ಮಾಡಿದ್ದಾರೆ.

ಸರ್ಕಾರದ ಪರ ಸಚಿವ ಮುರುಗೇಶ್ ನಿರಾಣಿ ಈ ಸಂವಂಧ ಹೇಳಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಬೆಮೆಲ್ ಕಾರ್ಖಾನೆ ಮುಚ್ಚುತ್ತಿಲ್ಲ. ಕ್ಯಾಬಿನೆಟ್ ಕಮಿಟಿ ಖಾಸಗೀಕರಣಕ್ಕೆ ಅನುಮತಿ ನೀಡಿದೆ. ಕ್ಯಾಬಿನೆಟ್ ಕಮಿಟಿ ಆನ್ ಎಕಾನಮಿಕ್ ಅಫೇರ್ಸ್ ಅನುಮೋದನೆ. 2006ರಲ್ಲಿಯೇ ಕೇಂದ್ರ ಸರ್ಕಾರ ಈ ಬಗ್ಗೆ ತೀರ್ಮಾನಿಸಿದೆ ಎಂದಿದ್ದಾರೆ.

ಇದೇ ವೇಳೆ ಕೇಂದ್ರದಿಂದ ನಿರ್ವಹಿಸಲಾಗದಿದ್ದರೆ ರಾಜ್ಯ ಸರ್ಕಾರವೇ ನಿರ್ವಹಿಸಲಿ ಎಂದು ಮುರುಗೇಶ್ ನಿರಾಣಿ ಮಾತಿಗೆ ವಿಪಕ್ಷ ನಾಯಕ ಹರಿಪ್ರಸಾದ್ ಆಗ್ರಹ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *