ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ನಾಯಕಿಗೆ ಚಾಕು ಇರಿತ..!

suddionenews
1 Min Read

 

ಉಡುಪಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಕಾಂಗ್ರೆಸ್ ನಾಯಕಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ರೀನಾ ಡಿಸೋಜಾ ಚಾಕು ಇರಿತಕ್ಕೆ ಒಳಗಾದವರು.

ಕಾಪು ಬ್ಲಾಕ್ ನ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ರೀನಾ ಡಿಸೋಜಾ ಸದ್ಯ ಅಪಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಬಳಿ ವ್ಯಕ್ತಿಯೊಬ್ಬರ ಜೊತೆ ಮಾತಾಡುತ್ತಾ ನಿಂತಿದ್ದಾಗ ಇದ್ದಕ್ಕಿದ್ದ ಹಾಗೇ ಬಂದ ವ್ಯಕ್ತಿಯಿಂದ ಈ ಘಟನೆ ನಡೆದಿದೆ.

ಚಾಕು ಇರಿದ ವ್ಯಕ್ತಿಯ ಹೆಸರು ಇನ್ನು ತಿಳಿದು ಬಂದಿಲ್ಲ. ಗಾಯಾಳು ರೀನಾ ಅವರನ್ನ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿತದ ಚಟ ಹೊಂದಿದ ನೆರೆಮನೆಯ 45 ವರ್ಷದ ವ್ಯಕ್ತಿಯಿಂದ ಈ ಘಟನೆ ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕೆ ಇಂಥ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *