ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅಯೋಧ್ಯ ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಅದರಲ್ಲಿ ಹಿಂದುತ್ವವನ್ನು ಐಸಿಸ್ ಗೆ ಹೋಲಿಕೆ ಮಾಡಿ ವಿವಾದಕ್ಕೀಡಾಗಿದ್ದಾರೆ. ಈ ಮಧ್ಯೆ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಬಗ್ಗೆ ಮಾತನಾಡಿರುವ ಅವರು, ಹತ್ಯಾಕಾಂಡ ಆಗಿದ್ದು ಆಗಿ ಹೋಯಿತು ಅದಕ್ಕೆ ನಾವೇನು ಮಾಡಣಾ ಎಂಬ ಬೇಜಾವಬ್ದಾರಿ ಪ್ರಶ್ನೆ ಮಾಡಿದ್ದಾರೆ. ಖುರ್ಷಿದ್ ಅವರು ಹಿಂದುತ್ವವನ್ನು ಐಸಿಸ್ ಮತ್ತು ಬೋಕೋ ಹರಾಮ್ ನಂಥಹ ಉಗ್ರರ ಮನಸ್ಥಿತಿಗೆ ಹೋಲಿಸಿದ್ದು ಬಹಳಷ್ಟು ವಿರೋಧಕ್ಕೆ ಕಾರಣವಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಖುರ್ಷಿದ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಸಲ್ಮಾನ್ ಖುರ್ಷಿದ್ ಈ ರೀತಿ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲೇನಲ್ಲ. ಈ ಮುಂಚೆ ದೆಹಲಿಯ ಬಾಟ್ಲಾ ಹೌಸ್ ನಲ್ಲಿ ನಡೆದ ಉಗ್ರರ ಎನ್ ಕೌಂಟರ್ ನಡೆ ಬಗ್ಗೆಯೂ ಮಾತನಾಡಿ, ವಿವಾದ ಸೃಷ್ಟಿಸಿದ್ದರು. ಇದೀಗ ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಖುರ್ಷಿದ್ ಈ ರೀತಿ ಪುಸ್ತಕ ಬರೆದಿರುವುದು ಚರ್ಚೆಗೆ ಕಾರಣವಾಗಿದೆ.

